ಮೈಸೂರು, ಜು.27: ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ವರ್ಧಂತಿ ವೈಭವದಿಂದ ನೆರವೇರಿತು.
ತಾಯಿಯ ಜನ್ಮದಿನದ ಪ್ರಯುಕ್ತ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರು.
ಮುಂಜಾನೆಯೇ ತಾಯಿ ಚಾಮುಂಡೇಶ್ವರಿಗೆ ಬೆಟ್ಟದಲ್ಲಿರುವ ದೇವಿಕೆರೆಯಿಂದ ಶುದ್ಧ ಜಲವನ್ನು ತಂದು ಅಭಿಶೇಕ ಮಾಡಲಾಯಿತು.
ನಂತರ ಪಂಚಾಮೃತ ಅಭಿಶೇಕ ಮಾಡಿ ತಾಯಿಯನ್ನು ವಿವಿಧ ಹೂಗಳಿಂದ ಅಲಂಕರಿಸಲಾಯಿತು.ತದನಂತರ ತಾಯಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಮೂರು ಬಾರಿ ಮೆರವಣಿಗೆಯಲ್ಲಿ ಕತೆತರಲಾಯಿತು.
ಈ ವೇಳೆ ಭಕ್ತರು ದೇವಿಯನ್ನು ಕಣ್ ತುಂಬಿಕೊಂಡು ಉಘೇ,ಉಘೇ ಚಾಮುಂಡಮ್ಮ,ಕಾಪಾಡು ತಾಯಿ ಎಂದು ಮೊರೆ ಇಟ್ಟರು.
ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಇಂದೂ ಕೂಡಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ನಾಡದೇವಿಗೆ ಬೆಳಿಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೊದಲ ಪೂಜೆ ಸಲ್ಲಿಸಿದರು.