Mon. Dec 23rd, 2024

ಶಾಸಕರ ಬೆಂಬಲ ಪಡೆದೇ ಸಿದ್ದು ಸಿಎಂ: ಮಹದೇವಪ್ಪ ಬ್ಯಾಟಿಂಗ್

Share this with Friends

ಬೆಂಗಳೂರು,ಜು.2: ಸಿಎಂ ಹುದ್ದೆ ಏನು ಕಡಲೆಪುರಿನಾ ಅವರಿಗೆ ಕೊಡಿ ಇವರಿಗೆ ಕೊಡಿ ಅಂತಾ ಹೇಳೋದಕ್ಕೆ ಎಂದು ಸಚಿವ ಮಹದೇವಪ್ಪ ಸಿದ್ದು ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಿಎಂ ಹುದ್ದೆ ನೀಡುವುದು ನನ್ನ ಕೈನಲ್ಲೂ ಇಲ್ಲ, ಧರ್ಮಗುರುಗಳ ಕೈನಲ್ಲೂ ಇಲ್ಲ,
ಶಾಸಕರ ಬೆಂಬಲ ಪಡೆದುಕೊಂಡೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು

ನಿನ್ನೆಯಷ್ಟೇ ಡಿಸಿಎಂ ಡಿ. ಕೆ.ಶಿವಕುಮಾರ್ ಯಾರೂ ಕೂಡಾ ಸಿಎಂ,ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡಬಾರದು,ನೀಡಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಆದರೂ ಮಹದೇವಪ್ಪ ಬಹಿರಂಗವಾಗಿಯೇ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಕೂಡಾ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ಶಾಸಕರು ಎಂದು ಹೇಳಿಕೆ ನೀಡಿದ್ದರು.

ಈಗ ಮಹಾದೇವಪ್ಪ ಕೂಡಾ ಸಿಎಂ ವಿಚಾರ ಪ್ರಸ್ತಾಪಿಸಿ ಡಿ.ಕೆ ಶಿ ಆದೇಶವನ್ನು ದಿಕ್ಕರಿಸಿರೋದು ವಿಶೇಷ.


Share this with Friends

Related Post