Sun. Apr 20th, 2025

ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಮಹಾಶಿವರಾತ್ರಿ ಸಡಗರ

Share this with Friends

ಮೈಸೂರು, ಮಾ.8: ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಮಹಾಶಿವರಾತ್ರಿ ಸಡಗರ ಮನೆಮಾಡಿತ್ತು.

ಪ್ರಣವ ಯೋಗ ಮಂದಿರದ ಯೋಗ ಗುರುಗಳು ಹಾಗೂ ವಿದ್ಯಾರ್ಥಿಗಳು ಮಹಾಶಿವರಾತ್ರಿ ಹಬ್ಬವನ್ನು ದೈವಿಕ ಸಡಗರದಿಂದ ನೆರವೇರಿಸಿದರು.

ಯೋಗ ಬಂಧುಗಳು ವೈಯಕ್ತಿಕವಾಗಿ ಕಾಶಿಯಿಂದ ತಂದ ಗಂಗಾಜಲದಿಂದ ಲಿಂಗಕ್ಕೆ ಅಭಿಷೇಕವನ್ನು ಮಾಡಿದರು, ನಂತರ ಭಜನೆ, ಮಹಾಮಂಗಳಾರತಿ ಮಾಡಿ ಭಕ್ತಾದಿಗಳಿಗೆ ಪ್ರಸಾದವನ್ನು ವಿವರಿಸಿದರು.

ಈ ವೇಳೆ ಯೋಗ ಗುರುಗಳಾದ ನಾ ಶ್ರೀಧರ್ ನೇತೃತ್ವದಲ್ಲಿ ಎಲ್ಲಾ ಬಂಧುಗಳಿಗೂ ಲಿಂಗ ಹಾಗೂ ರುದ್ರಾಕ್ಷಿಯನ್ನು ವಿತರಿಸಲಾಯಿತು,

ಕೃಷ್ಣಮೂರ್ತಿ, ಕೃಷ್ಣಮೂರ್ತಿ ಅವಧಾನಿ, ಸಂಧ್ಯಾ, ವಿಜಯ್ ಕುಮಾರ್, ಸುಮಿತ್ರ, ವಿಶ್ವನಾಥ್ ,ವಿಮಲಾ, ಶೇಖರ್, ವೀಣಾ, ಮತ್ತಿತರ ಹಿರಿಯ ನಾಗರಿಕರು ಹಾಜರಿದ್ದರು.


Share this with Friends

Related Post