Fri. Nov 1st, 2024

ಮಹಾತ್ಮ ಗಾಂಧೀಜಿ ಯವರ ಜೀವನವೇ ಸಂದೇಶ:ಸಿ. ಎನ್ ಮಂಜೇಗೌಡ

Share this with Friends

ಮೈಸೂರು: ಮಹಾತ್ಮ ಗಾಂಧೀಜಿ ಯವರ ಜೀವನವೇ ಒಂದು ಸಂದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ತಿಳಿಸಿದರು.

ಕರ್ನಾಟಕ ಸೇನಾ ಪಡೆ ವತಿಯಿಂದ ಮಂಗಳವಾರ ಮೈಸೂರಿನ ಅಗ್ರಹಾರ ವೃತ್ತದಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದೇಶ ಕಂಡ ಅತೀ ಸರಳ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ 1857 ನೇ ಇಸವಿಯಿಂದ ಹೋರಾಟಗಳು ನಡೆದರೂ, ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಬಂದ ಮೇಲೆ ಹೆಚ್ಚಿನ ಹೇಗ ಪಡೆಯಿತು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಉಪ್ಪಿನ ಸತ್ಯಾಗ್ರಹ ಚಳುವಳಿ ಹಾಗೂ ಅಹಿಂಸಾ ಚಳುವಳಿ ಗಳನ್ನು ನಡೆಸಿ ಇಡೀ ದೇಶದಲ್ಲೇ ಸಂಚಲನ ಮೂಡಿಸಿದರು ಎಂದು ಸ್ಮರಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಕಂಡ ಸರಳ ಪ್ರಧಾನಿ ಹಾಗೂ ಬಡವರಿಗೆ ಹಲವಾರು ಯೋಜನೆಗಳನ್ನು ಹಾಕಿಕೊಟ್ಟ ಮೊದಲ ಪ್ರಧಾನಿ. ಇಂತಹ ಮಹನೀಯರುಗಳ ತತ್ವ, ಆದರ್ಶಗಳನ್ನು ಈಗಿನ ರಾಜಕೀಯ ಮುಖಂಡರುಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಇಂತಹ ಮಹನೀಯರುಗಳ ಜೀವನಚರಿತ್ರೆಯನ್ನು ಪ್ರಾಥಮಿಕ ಶಾಲೆಗಳ
ಪಠ್ಯ ಪುಸ್ತಕಗಳಲ್ಲಿ ಕಡ್ಡಾಯವಾಗಿ ಅಳವಡಿಸಿ, ಮಕ್ಕಳು ದೊಡ್ಡವರಾದ ಮೇಲೆ ಸರಳವಾಗಿ, ಆದರ್ಶವಾಗಿ ಬದುಕಲು ಪ್ರೇರೇಪಿತರಾಗಬೇಕೆಂದು ಸರ್ಕಾರ ವನ್ನು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ ದೀಪಕ್ ಪ್ರಭುಶಂಕರ್, ಕೃಷ್ಣಪ್ಪ,ಸುರೇಶ್ ಗೋಲ್ಡ್, ಮೊಗಣ್ಣಾಚಾರ್, ಪ್ರಭಾಕರ್, ಹನುಮಂತಯ್ಯ, ಶಿವಲಿಂಗಯ್ಯ, ಲಕ್ಷ್ಮೀದೇವಿ, ಸುಶೀಲಾ ನಂಜಪ್ಪ ನೇಹಾ, ಲಕ್ಷ್ಮೀ,ಬಾಗ್ಯಮ್ಮ , ಇಂದಿರಾ, ಬಸವರಾಜು, ರಘುರಾಜ್, ಮಹಾದೇವ ಸ್ವಾಮಿ ಗೌಡ, ಸುಬ್ಬೇಗೌಡ, ಗಣೇಶ್ ಪ್ರಸಾದ್, ರವಿನಾಯಕ್, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post