ಮೈಸೂರು,ಜೂ.10: ಪರಿಸರ ದಿನಾಚರಣೆ ಭಾವನಾತ್ಮಕ ಹಬ್ಬವಾಗಿ ಆಚರಣೆ ಮಾಡುವ ಅಗತ್ಯವಿದೆ ಎಂದು ನಿವೃತ್ತ ಅರಣ್ಯ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.
ನಗರದ ಬೋಗಾದಿಯ ರೂಪ ನಗರದಲ್ಲಿ ರೂಪನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಪರಿಸರ ದಿನ ಅಂಗವಾಗಿ ಗಿಡ ನೆಟ್ಟು 500ಕ್ಕೂ ಹೆಚ್ಚು ಹಣ್ಣು ಮತ್ತು ಹೂವಿನ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಿ ಅವರು ಮಾತನಾಡಿದರು.
ಸಂಘಟನೆಯ ಪ್ರತಿ ಸದಸ್ಯರು ವರ್ಷಕ್ಕೆ ಒಂದರಂತೆ ಸಸಿ ನೆಡಲು ಮುಂದಾಗಬೇಕು. ರೈತರು ಹೊಲದಲ್ಲಿ ಸಸಿ ನೆಡಲು ಪ್ರೇರಣೆ ನೀಡಿ ಸಹಕಾರ, ಸಹಯೋಗ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಪರಿಸರ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪರಿಸರ ಕಾಳಜಿ ಕೇವಲ
ಸಮಾರಂಭದಲ್ಲಿ ವ್ಯಕ್ತ ಪಡಿಸಿದರೆ ಸಾಲದು, ಕುಟುಂಬ ನಿರ್ವಹಿಸುವ ಪ್ರತಿಯೊಬ್ಬರೂ ಮಕ್ಕಳಿಗೆ ಸಸಿ ನೆಡಲು ಪ್ರೇರಣೆ ನೀಡಿ ತ್ಯಾಜ್ಯ ಕಡಿತಗೊಳಿಸಬೇಕು ಎಂದು ಚಂದ್ರಶೇಖರ್ ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಉದಯಶಂಕರ್, ಉಪಾಧ್ಯಕ್ಷೆ ಉಮಾ ಪೇಶಾವರ್, ಖಜಾಂಚಿ ಶ್ರೀಧರ್ ತಂತ್ರಿ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಡಿ , ಮಲ್ಲಮ್ಮ ಗಾಣಿಗೆ ಪ್ರಿಯ, ಸೋಮಯಾಜಿ, ಮಂಜುನಾಥ್ ಎಂ ಸಿ, ಸುಬ್ರಹ್ಮಣ್ಯ, ಪ್ರಿಯಾ, ಶಶಿಧರ್,ಬಾಲಕೃಷ್ಣ, ಮಾಲತಿ, ಸೂರ್ಯನಾರಾಯಣ, ಮಾಯ ,ಮಲ್ಲೇಶ್, ರವಿಕುಮಾರ್, ಅಚ್ಚುತರಾವ್ ಮತ್ತಿತರರು ಹಾಜರಿದ್ದರು.