Mon. Dec 23rd, 2024

ಯೋಗ ಜೀವನದ ಪದ್ಧತಿಯಾಗಲಿ : ಡಾ. ವೆಂಕಟ್ ಕೃಷ್ಣ

Share this with Friends

ಮೈಸೂರು,ಜೂ.12: ನಿತ್ಯ ಯೋಗ ಮಾಡುವುದರಿಂದ ಅನೇಕ ರೋಗಗಳಿಗೆ ಪರಿಹಾರ ಸಿಗುತ್ತದೆ ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟ್ ಕೃಷ್ಣ ಕೆ.ವಿ ತಿಳಿಸಿದರು

ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿಕೊಂಡರೆ ಸದೃಢ ದೇಹ ಮತ್ತು ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ನಗರದ ಗೋಕುಲಂ ನಲ್ಲಿರುವ ಸೌಗಂಧಿಕಾ ಉದ್ಯಾನವನದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಯೋಗ ವಿಭಾಗ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಹಿಳಾ ಸಬಲೀಕರಣಕ್ಕಾಗಿ ಯೋಗ ಯೋಗಾನುಶಾಸನ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿನನಿತ್ಯ ಜೀವನದಲ್ಲಿ ಮಹಿಳೆಯರಿಗೆ ಯೋಗ ಎಷ್ಟು ಅವಶ್ಯಕತೆ ಎಂಬುದನ್ನು ತಿಳಿಸುವುದರ ಜೊತೆಗೆ ಯೋಗದಿಂದ ಹೇಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟರು

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಪ್ರಮುಖರಾದ ನಾಗಮಣಿ ಜೆ ಅವರು ಮಾತನಾಡಿ,
ನಿಯಮಿತವಾಗಿ ಯೋಗಾಭ್ಯಾಸ ಮತ್ತು ಸಾತ್ವಿಕ ಆಹಾರ ಸೇವನೆ ಮನುಷ್ಯರನ್ನು ಯಾವಾಗಲೂಆರೋಗ್ಯವಂತರನ್ನಾಗಿಡು
ತ್ತದೆ,ರಾಷ್ಟ್ರ ಪ್ರೇಮ ಬೆಳೆಸಿಕೊಂಡು ನಿಸರ್ಗ ಪ್ರೀತಿಸಿ ಬದುಕಿ ಬಾಳಿದರೆ ಮನುಷ್ಯನ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು

ಇದೇ ವೇಳೆ 50ಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಿದರು

ಚಾಮರಾಜ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಂದ್ರಕಲಾ, ದರ್ಶನ್ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post