Sun. Apr 13th, 2025

ಪತ್ನಿಯ ತಲೆ ಕತ್ತರಿಸಿ ರುಂಡ ಹಿಡಿದು ಸುತ್ತಾಡಿದ ಭೂಪ!

Share this with Friends

ಕೋಲ್ಕತ್ತಾ, ಫೆ.15: ಪಾಪಿ‌ ಪತಿ ಪತ್ನಿಯ ತಲೆ ಕತ್ತರಿಸಿ ಅದನ್ನು ಹಿಡಿದುಕೊಂಡು ಊರೆಲ್ಲಾ ಸುತ್ತಾಡಿದ‌ ಪೈಶಾಚಿಕ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ.

ಗೌತಮ್ ಗುಚ್ಚೈತ್ (40) ಎಂಬಾತ ಪತ್ನಿಯ ತಲೆಕತ್ತರಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮಾನಸಿಕ‌ ಅಸ್ವಸ್ಥ ಗೌತಮ್‌ ಪತ್ನಿಯ ‌ಶಿರವನ್ನು‌ ಹರಿತವಾದ‌ ಆಯುಧದಿಂದ ಕತ್ತರಿಸಿ ಸುರಿಯುತ್ತಿದ್ದ ರಕ್ತಸಹಿತ ರುಂಡದೊಂದಿಗೆ ಚಿಸ್ತಿಪುರ ಬಸ್ ನಿಲ್ದಾಣದ ಬಳಿ ಅಡ್ಡಾಡುತ್ತಿದ್ದಾಗ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗೌತಮ್ ನನ್ನು ಬಂಧಿಸಿ ರುಂಡವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಗುಚ್ಚೈತ್ ಮಾನಸಿಕ ಅಸ್ವಸ್ಥ,ಹರಿತ ಆಯುಧದಿಂದ ಪತ್ನಿಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆತನ ಮನೆಗೆ ತೆರಳಿ ಪತ್ನಿಯ ಮುಂಡವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ ಈ ಬೀಭತ್ಸ ಘಟನೆಯಿಂದ‌ ಚಿಸ್ತಿಪುರ ಜನತೆ ಬೆಚ್ಚಿಬಿದ್ದಿದ್ದಾರೆ.


Share this with Friends

Related Post