Mon. Dec 23rd, 2024

ಮೆಟ್ರೊ ಟ್ರ್ಯಾಕ್ ಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Share this with Friends

ಬೆಂಗಳೂರು, ಆ.3: ಬೆಂಗಳೂರಿನಲ್ಲಿ ಮೆಟ್ರೋ ಟ್ರ್ಯಾಕ್ ಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಹಸಿರು ಮಾರ್ಗದ ದೊಡ್ಡ ಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಇಂದು ಸಂಜೆ 5.45 ರಲ್ಲಿ ಈ ಘಟನೆ ನಡೆದಿದೆ.ಹಾಗಾಗಿ ಯಲಚೇನಹಳ್ಳಿ – ರೇಷ್ಮೆ ಸಂಸ್ಥೆ ಮಾರ್ಗದ ಮೆಟ್ರೊ ಸಂಚಾರ ಸ್ಥಗಿತಗೊಂಡಿದೆ.

ಮೆಟ್ರೋ ರೈಲು ಬರುತ್ತಿದ್ದಂತೆ ಏಕಏಕಿ ವ್ಯಕ್ತಿ ಮೆಟ್ರೊ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರಯಾಣಿಕರು ನೋಡು,ನೋಡುತ್ತಿದ್ದಂತೆ ಈ ಘಟನೆ ನಡೆದಿದ್ದು,ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.

ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಟ್ರ್ಯಾಕ್ ನಿಂದ ಮೃತದೇಹ ಹೊರತೆಗೆಯಲು ಕಾರ್ಯ ಕೈಗೊಂಡಿದ್ದಾರೆ.


Share this with Friends

Related Post