Mon. Dec 23rd, 2024

ಹುಚ್ಚುನಾಯಿ ದಾಳಿಗೆ ವ್ಯಕ್ತಿ ಸಾವು

Share this with Friends

ಹುಣಸೂರು,ಫೆ.15: ಹುಚ್ಚು ನಾಯಿ ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

ಹೆಗ್ಗಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಸುರೇಶ (48) ಎಂಬವರು ಮೃತಪಟ್ಟಿದ್ದಾರೆ.

ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ಸುರೇಶ್ ಮನೆಗೆ ವಾಪಸಾಗುತ್ತಿದ್ದಾಗ ಹುಚ್ಚುನಾಯಿ ದಾಳಿ ಮಾಡಿದೆ.

ತೀವ್ರ ಗಾಯಗೊಂಡ ಸುರೇಶ್ ರನ್ನ ಹುಣಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು.

ರೇಬೀಸ್ ರೋಗ ಉಲ್ಬಣವಾದ ಹಿನ್ನಲೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಮೃತಪಟ್ಟಿದ್ದಾರೆ.

ಈ ಸಂಭಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪಶುಸಂಗೋಪನಾ ಇಲಾಖೆ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕೂಡಲೆ ಹುಚ್ಚು ನಾಯಿಯನ್ನು ಹಿಡಿಯಲು ಕ್ರಮ ವಹಿಸಬೇಕು ಮತ್ತು ಇತರರಿಗೆ ತೊಂದರೆ ನೀಡುವ ಮೊದಲು‌ ಗ್ರಾಮ ಪಂಚಾಯಿತಿಯವರು ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


Share this with Friends

Related Post