ಮೈಸೂರು,ಫೆ.24: ಹೆತ್ತವರ ವಿರೋಧದ ನಡುವೆ ಅಪ್ರಾಪ್ತೆಯನ್ನ ವಿವಾಹವಾದ ಮದುಮಗ ಹಾಗೂ ಪೋಷಕರ ವಿರುದ್ದ
ಎಫ್ ಐ ಆರ್ ದಾಖಲಾಗಿದೆ.
ಮದುಮಗ ರಿಹಾನಾಚಪಾಷಾ,ಆತನ ತಂದೆ ಶೇಕ್ ಮೊಹಿದ್ದೀನ್ ತಾಯಿ ಫರ್ವೀನ್ ತಾಜ್ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
16 ವರ್ಷದ ಅಪ್ರಾಪ್ತೆಯನ್ನ ವಿವಾಹವಾಗಲು ಬಯಸಿದ್ದ ರಿಹಾನ್ ಪಾಷಾ ಮನವಿಯನ್ನ ಬಾಲಕಿಯ ತಾಯಿ ವಿರೋಧಿಸಿದ್ದಾರೆ.ಬಾಲಕಿಗೆ ಕೇವಲ 16 ವರ್ಷವಾಗಿದ್ದರಿಂದ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ.
ವರನ ಕಡೆಯವರು ಎಂಗೇಜ್ ಮೆಂಟ್ ಮಾಡಿಕೊಡಿ ನಂತರ 18 ವರ್ಷ ದಾಟಿದ ಮೇಲೆ ಮದುವೆ ಆಗುವುದಾಗಿ ನಂಬಿಸಿದ್ದಾರೆ.ಹುಡುಗನ ಕಡೆಯವರ ಮಾತನ್ನ ನಂಬಿ ಎಂಗೇಜ್ ಮೆಂಟ್ ಮಾಡಿದ್ದಾರೆ.
ನಂತರ ಬಾಲಕಿಯ ಜೊತೆ ರಿಹಾನ್ ಪಾಷಾ ಸಂಪರ್ಕ ಬೆಳೆಸಿಕೊಂಡಿದ್ದಾನೆ.ಅಪ್ರಾಪ್ತೆಯ ತಲೆಕೆಡಿಸಿ ಬಾಲ್ಯವಿವಾಹ ಕಾನೂನಿಗೆ ವಿರುದ್ದ ಎಂದು ಹೇಳಿದರೂ ಲೆಕ್ಕಿಸದೆ ವಿವಾಹವಾಗಿದ್ದಾನೆ.
ಅಪ್ರಾಪ್ತ ಮಗಳ ಮದುವೆ ಆದ ಮದುಮಗ ಹಾಗೂ ಆತನ ಹೆತ್ತವರ ವಿರುದ್ದ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಉದಯಗಿರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.