Thu. Dec 26th, 2024

ಜು.12 ರಂದು రాజ్య ಸರ್ಕಾರಿ ನೌಕರರ ಬೃಹತ್ ಹೋರಾಟ

Share this with Friends

ಬೆಂಗಳೂರು,ಜು.10: ಹಳೆ ಪಿಂಚಣಿ ಯೋಜನೆ ಜಾರಿ‌ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಜು.12 ರಂದು ಸರ್ಕಾರಿ ನೌಕರರು ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಕೆ ಬೃಹತ್ ಹೋರಾಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಕರ್ನಾಟಕ రాజ్య ಸರ್ಕಾರಿ ನೌಕರರ ನೌಕರರ ಸಂಘ,ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ, ಕರ್ನಾಟಕ ವಿಧಾನಪರಿಷತ್ ಸಚಿವಾಲಯ ನೌಕರರ ಸಂಘ ಹಾಗೂ ಕರ್ನಾಟಕ ವಿಧಾನಸಭೆ ಸಚಿವಾಲಯ ನೌಕರರ ಸಂಘಗಳ ನೇತೃತ್ವದಲ್ಲಿ ಈ ಹೋರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಆದೇಶ ಹೊರಡಿಸುವುದು,
ಎನ್.ಪಿ.ಎಸ್. ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವುದು,ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕೆ ತರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹೋರಾಟದ ಮೂಲಕ ಜು.12 ರಂದು ಮಧ್ಯಾಹ್ನ 1.30 ಕ್ಕೆ ವಿಕಾಸ ಸೌಧದ ಗಾಂಧಿ ಪ್ರತಿಮೆ ಮುಂಭಾಗ ಮನವಿ ಸಲ್ಲಿಸಲಾಗುತ್ತದೆ.

ಹಾಗಾಗಿ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಭಾಗವಹಿಸಿ, ಹೋರಾಟಕ್ಕೆ ಕೈಜೋಡಿಸಬೇಕೆಂದು ಕರ್ನಾಟಕ రాజ్య ಸರ್ಕಾರಿ ನೌಕರರ ಸಂಘ‌ದ ಪದಾಧಿಕಾರಿಗಳು ‌ಮನವಿ ಮಾಡಿದ್ದಾರೆ.


Share this with Friends

Related Post