Mon. Dec 23rd, 2024

ಮೀನಾ ತೂಗುದೀಪ್ ಶ್ರೀನಿವಾಸ್ ಸೇರಿ 15 ಮಂದಿಗೆ ಜಯ

Share this with Friends

ಮೈಸೂರು, ಮಾ.31: ಬಲಿಜ ಸಂಘದ ಚುನಾವಣೆಯಲ್ಲಿ ಮೀನಾ ತೂಗುದೀಪ್ ಶ್ರೀನಿವಾಸ್ ಸೇರಿದಂತೆ ಇನ್ನಿತರ 15 ಮಂದಿ ಜಯಶೀಲರಾಗಿದ್ದಾರೆ.

ಜಯನಗರದ ಕೃಷ್ಣದೇವರಾಯ ರಸ್ತೆ ಯಲ್ಲಿರುವ ಬಲಿಜ ಸಂಘದ 5 ವರ್ಷಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮೀನಾ ತೂಗುದೀಪ್ ಶ್ರೀನಿವಾಸ್ ಹಾಗೂ 15 ಜನ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

ಚುನಾವಣೆಯಲ್ಲಿ 30 ಜನ ಸ್ಪರ್ಧಿಸಿದ್ದರು. ಅದರಲ್ಲಿ 15 ಜನ ಅತಿ ಹೆಚ್ಚು ಮತವನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ.

ಎಸ್. ಹೇಮಂತ್ ಕುಮಾರ್, ಕೆ ಲಿಂಗರಾಜು, ಎಂ. ಎಸ್ ದಾಮೋದರ, ಜಿ. ಮಹೇಶ್ ನಾಯ್ಡು, ಮಂಜುನಾಥ್ .ಆರ್, ಯತಿರಾಜ್, ಹೆಚ್ ವಿ ಗೋವಿಂದರಾಜ್, ಪಿ ಕಾಮರಾಜ್, ಯೋಗೀಶ್ ಎಂ.ಎಸ್, ರಾಘವೇಂದ್ರ ಎo .ಎಸ್, ಆರ್ ರವಿಕುಮಾರ್, ಕೆ ನಾಗರಾಜು ಸಾಮಾನ್ಯ ವರ್ಗದಲ್ಲಿ ಜಯಶೀಲರಾಗಿದ್ದಾರೆ.

ಮಹಿಳಾ ಮೀಸಲು ಮೀನಾ ತೂಗುದೀಪ್ ಶ್ರೀನಿವಾಸ್, ಸುನಿತಾ ಕೆ, ಪೂಜಾ ಜಯ ಗಳಿಸಿದ್ದಾರೆ.

ಜಯಶೀಲರಾದ ತಂಡಕ್ಕೆ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಎಸ್. ಎನ್ ರಾಜೇಶ್, ಹರೀಶ್ ನಾಯ್ಡು,ಲೀಲಾ ನಾಯ್ಡು, ಆನಂದ್, ಚಿತ್ರನಟರಾದ ವಿಜಯ್ ಸೂರ್ಯ, ರಾಕೇಶ್ ನಾಯ್ಡು, ಕಿರಣ್ ನಾಯ್ಡು‌ ಮತ್ತಿತರರು ಶುಭ ಹಾರೈಸಿದರು.


Share this with Friends

Related Post