ನಂಜನಗೂಡು,ಜೂ.21: ಇಂದಿನ ಆಧುನಿಕ ವೇಗದ ಜೀವನದಲ್ಲಿ ಯೋಗ ಮತ್ತು ಧ್ಯಾನದಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಪ್ರಾಂಶುಪಾಲ ಲಯನ್ ಸಿ.ಆರ್ .ದಿನೇಶ್ ತಿಳಿಸಿದರು.
ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಬಗ್ಗೆ ಅವರು ಅರಿವು ಮೂಡಿಸಿದರು.
ಉಪನ್ಯಾಸಕರಾದ ಎನ್ ನಾಗರಾಜು, ಹೆಚ್ .ಕೆ ಪ್ರಕಾಶ್ ಡಾ.ಕೆ. ಮಾಲತಿ ಡಾ.ಎ ಸುಮಾ ಅವರು ಯೋಗಸಾನ ಮತ್ತು ಧ್ಯಾನದ ಹಲವು ಆಯಾಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳು, ಸೂರ್ಯ ನಮಸ್ಕಾರ ಮತ್ತು ಓಂಕಾರ ಹೇಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಉಪನ್ಯಾಸಕರಾದ ಅಶ್ವಥ್ ನಾರಾಯಣ್ ಗೌಡ, ಜುಡಿತ್, ಲಿಂಗಣ್ಣಸ್ವಾಮಿ, ರಂಗಸ್ವಾಮಿ, ರವಿ, ಮೀನಾ, ವಸಂತಕುಮಾರಿ, ಬಸವಣ್ಣ, ಹರೀಶ್, ಮೋಹನ್,ನಾಗವೇಣಿ ಮತ್ತಿತರರು ಹಾಜರಿದ್ದರು.