Mon. Dec 23rd, 2024

ಮಾವುತರು,ಕಾವಾಡಿಗರ ಜತೆ ಊಟ ಸವಿದ ಸಚಿವ ಮಹದೇವಪ್ಪ

Share this with Friends

ಮೈಸೂರು: ದಸರಾ ಅಂಗವಾಗಿ ಮಾವುತರು,ಕಾವಾಡಿಗಳಿಗೆ ಜಿಲ್ಲಾಡಳಿತ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಉಪಹಾರದ‌ ವೇಳೆ ಸಚಿವ ಡಾ ಹೆಚ್.ಸಿ.ಮಹದೇವಪ್ಪ ತಿಂಡಿ ಬಡಿಸಿ ಮಾವುತ ಕಾವಾಡಿಗರ ಕುಟುಂಬದ ಕುಶಲೋಪರಿ‌ ವಿಚಾರಿಸಿ ಅವರೊಂದಿಗೆ ಟಿಫಿನ್ ಸೇವಿಸಿದರು.

ಬಳಿಕ ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿದರು.

ಮಾವುತರು ಹಾಗೂ ಕಾವಾಡಿಗರ ಮಕ್ಕಳಿಗೆ ತಾತ್ಕಾಲಿಕವಾಗಿ ತೆರೆದಿರುವ ಶಾಲೆಗೆ ಚಾಲನೆ ನೀಡಿದರು,ನಂತರ ಮಾವುತ ಮತ್ತು ಕಾವಾಡಿಗರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.

ಇದೇ ವೇಳೆ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಎಲ್ಲ‌ ವ್ಯವಸ್ಥೆ ಸರಿ ಇದೆಯೆ ಎಂಬುದನ್ನು ವೀಕ್ಷಿಸಿ ತಿಳಿದುಕೊಂಡರು.

ಶಾಸಕ ತನ್ವೀರ್ ಸೇಠ್,ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿ ಪಂ ಸಿಇಒ ಕೆ.ಎಂ.ಗಾಯತ್ರಿ, ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post