ಬೆಂಗಳೂರು, ಮಾ.1 : ಶಿವಕುಮಾರ್ ಅವರು ಇತ್ತೀಚಿಗೆ ಮಹಾ ಕುಂಭಮೇಳಕ್ಕೆ ಹೊಗಿದ್ದು, ಶಿವರಾತ್ರಿಯಂದು ಇಶಾ ಫೌಂಡೇಶನ್ ನಲ್ಲಿ ನಡೆದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಸ್ವಪಕ್ಷದಿಂದಲೇ ಪರ-ವಿರೋಧ ವ್ಯಕ್ತವಾಗುತ್ತಿರುವಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಒಂದು ಹೆಜ್ಜೆ ಮುಂದೆ ಬಂದು ಡಿ ಕೆ ಶಿವಕುಮಾರ್ ನಡೆಗೆ ಬೆಂಬಲ ಸೂಚಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಮಹಾ ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿದ್ದರಲ್ಲಿ ತಪ್ಪೇನಿದೆ, ನಾನು ಕುಂಭಮೇಳಕ್ಕೆ ಹೋಗಿದ್ದೇನೆ, ನನ್ನ ಮಗಳು ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮಕ್ಕೆ ಆಹ್ವಾನ ಮೆರೆಗೆ ಹೋಗಿದ್ದಾರೆ ಇದು ಕೂಡ ತಪ್ಪು ಎಂದರೆ ಹೇಗೆ ಎಂದು ರಾಮಲಿಂಗಾರೆಡ್ಡಿ ಅವರು ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ಹಿಂದೂವಾಗಿ ಹುಟ್ಟಿದ್ದೇನೆ ಹಿಂದುವಾಗೇ ಸಾಯುತ್ತೇನೆ ಎಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯನ್ನ ಬಲವಾಗಿ ಸರ್ಮಥಿಸಿಕೊಂಡ ಸಚಿವರು ಇತಂಹವುಗಳಲ್ಲಿ ತಪ್ಪು ಹುಡುಕುವ ಕೆಲಸ ಬಿಡಬೇಕು ಎಂದಿದ್ದಾರೆ.