Sat. Mar 7th, 2026

ಮಕ್ಕಳಿಗೆ ಚಾಕ್ಲೆಟ್ ನೀಡಿ ಪೋಲಿಯೊ ಲಸಿಕೆಗೆ ಸಚಿವ ಬಿ.ನಾಗೇಂದ್ರ ಚಾಲನೆ

Share this with Friends

ಬಳ್ಳಾರಿ,ಮಾ.3:‌ ಬಳ್ಳಾರಿಯ ಗಾಂಧಿನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ‌ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮಕ್ಕಳಿಗೆ ಪೋಲಿಯೋ ಲಸಿಕೆಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಲಸಿಕಾ ಕೇಂದ್ರಕ್ಕೆ ಬಂದ ಮಕ್ಕಳಿಗೆ ಚಾಕೊಲೇಟ್ ಕೊಟ್ಟು ಅವರಲ್ಲಿದ್ದ ಆತಂಕ ದೂರ ಮಾಡಿ ಪೊಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಕ್ಕೆ ಪೊಷಕರು ಖುಷಿ ಪಟ್ಟರು.

ಅಲ್ಲದೆ ಕೇಂದ್ರಕ್ಕೆ ಬರುವ ಪ್ರತಿ ಮಗುವಿಗೂ ಚಾಕೊಲೇಟ್ ಹಂಚುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಿ ಚಾಕೊಲೇಟ್ ಬಾಕ್ಸ್ ಗಳನ್ನು ‌ಸಚಿವರು ನೀಡಿದರು.

ಈ ವೇಳೆ ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಜಿಲ್ಲಾ ಆರ್ ಸಿ ಅಧಿಕಾರಿ ಡಾ.ಅನೀಲ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ ಹಾಗೂ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.


Share this with Friends

Related Post