Mon. Dec 23rd, 2024

ನಾಪತ್ತೆಯಾಗಿದ್ದ ತಾಯಿ,ಮಗಳು ನದಿಯಲ್ಲಿ ಶವವಾಗಿ ಪತ್ತೆ

Share this with Friends

ಕಲಬುರಗಿ,ಫೆ.13: ಮನೆಯಿಂದ ಹೊರ‌ ಹೋಗಿ ನಾಪತ್ತೆಯಾಗಿದ್ದ ತಾಯಿ, ಮಗಳು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕಲಬುರಗಿಯ ಎಂ.ಬಿ.ನಗರದ ತಾಯಿ ಸುಮಲತಾ(45) ಹಾಗೂ ಮಗಳು ವರ್ಷಾ(22) ಅವರ ದೇಹಗಳು ನದಿಯ ದಡದಲ್ಲಿ ಪತ್ತೆಯಾಗಿದೆ.

ಸೋಮವಾರ ಸಂಜೆ ತಾಯಿ, ಮಗಳು ಮನೆಯಿಂದ ಹೊರಹೋಗಿದ್ದರು.

ಇಂದು ಬೆಳಿಗ್ಗೆ ಶಹಾಬಾದ್ ಸಮೀಪದ ಕಾಗಿಣಾ ನದಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.

ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ ಮಗಳು ಸಾವಿಗೆ ಶರಣಾಗಿರಬಹುದು ಎಂದು
ಸ್ಥಳೀಯರು ಹೇಳುತ್ತಾರೆ.

ವರ್ಷಾಗೆ ಇನ್ನೂ ವಿವಾಹವಾಗಿರಲಿಲ್ಲ,ಸುಂದರ ಹುಡುಗಿ ದುಡುಕಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅಕ್ಕಪಕ್ಕದ ನಿವಾಸಿಗಳು ತುಂಬಾ ಬೇಸರ ವ್ಯಕ್ತಪಡಿಸಿದರು

ಘಟನೆ ಸಂಬಂಧ ಶಹಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ಪ್ರಾರಂಭಿಸಿದ್ದಾರೆ.

ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ವಿಧಿವಿಜ್ಞಾನ ವರದಿ ಬಂದ ನಂತರ ಗೊತ್ತಾಗಲಿದೆ,ನಾವು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.


Share this with Friends

Related Post