Mon. Dec 23rd, 2024

ನಟ ಮಿಥುನ್ ಚಕ್ರವರ್ತಿಗೆ ಆಸ್ಪತ್ರೆಗೆ ದಾಖಲು

Mithun Chakraborty
Share this with Friends

ಮುಂಬೈ: ಬಾಲಿವುಡ್​ನ ಖ್ಯಾತ ಹಿರಿಯ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರನ್ನು ಶನಿವಾರ ಬೆಳಗ್ಗೆ ಎದೆನೋವು ಎಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿಥುನ್ ಚಕ್ರವರ್ತಿ ಅವರ ಆಪ್ತ ಮೂಲಗಳು ನಟನಿಗೆ ಅಸ್ವಸ್ಥತೆ ಉಂಟಾಗಿದೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಾಹಿತಿ ಕೊಟ್ಟಿದ್ದಾರೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಿಥುನ್ ಚಕ್ರವರ್ತಿ ಅವರ ಕುಟುಂಬದವರಾಗಲಿ ಅಥವಾ ಅಧಿಕೃತವಾಗಿ ಈ ಮಾಹಿತಿ ಇರದೇ ಇದ್ದರೂ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣದಿಂದಾಗಿ ನೆಚ್ಚಿನ ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಮಿಥುನ್ ಚಕ್ರವರ್ತಿ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದಿದ್ದೇನೆ, ಡಿ.ಕೆ.ಸುರೇಶ್ ಅವರನ್ನು ಅಲ್ಲ : ಈಶ್ವರಪ್ಪ


Share this with Friends

Related Post