ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅವರು ವಾರ್ಡ್ ನಂ 52 ರ ವ್ಯಾಪ್ತಿಯ ಕೆ ಸಿ ಲೇಔಟ್ ನಲ್ಲಿ ಪಾದಯಾತ್ರೆ ಮಾಡಿ ನಾಗರೀಕರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿದರು.
ಕೆ ಸಿ ಲೇಔಟ್ ದೊಡ್ಡ ಉದ್ಯಾನದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಮಾಡಿಕೊಡಿ, ಮಳೆ ನೀರು ಹರಿವು ತೊಂದರೆ, ಹೋಗಲಾಡಿಸಿ, ಒಳಚರಂಡಿ ಹೂಳು ತೆಗೆಸಬೇಕು ಮತ್ತು ರಾತ್ರಿ ವೇಳೆ ಬೀದಿ ನಾಯಿಗಳ ಕಾಟ ತಪ್ಪಿಸಬೇಕು ಎಂದು ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶ್ರೀವತ್ಸ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಛಾಯಾ ನವೀನ್,ಬಿಜೆಪಿ ಮುಖಂಡರಾದ ಪ್ರಸನ್ನ, ನವೀನ್,ಗೋಕುಲ್ ಗೋವರ್ಧನ್, ಹರೀಶ್, ಹೊಯ್ಸಳ,ಸಂತೋಷ್,ಶೇಖರ್, ವಿಜಯ ಲಕ್ಷ್ಮಿ,ಪದ್ಮ
ಕೆ. ಸಿ ಬಡಾವಣೆ ನಿವಾಸಿಗಳ ಸಂಘದ ವಿಶ್ವನಾಥ್, ದರ್ಮೆಂದ್ರ,ನಿಂಗೆಗೌಡ, ವೆಂಕಟೇಶ್, ಕೃಷ್ಣ,ಪ್ರದೀಪ್ ಕುಮಾರ್, ಮಧು, ಕಿಶೋರ್ ಮತ್ತಿತರರು ಹಾಜರಿದ್ದರು.
ನಗರಪಾಲಿಕೆಯ ಹಿರಿಯ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ಅಧಿಕಾರಿಗಳು ಶಾಸಕರಿಗೆ ಸಾಥ್ ನೀಡಿದರು.