Tue. Dec 24th, 2024

ಮೈಸೂರಿನ ರಾಮಾನುಜ ರಸ್ತೆಯಲ್ಲಿ ಕಾಮಗಾರಿ ಪರಿಶೀಲಿಸಿದ ಶಾಸಕ ಶ್ರೀವತ್ಸ

Share this with Friends

ಮೈಸೂರು, ಮಾ.5: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅವರು ಇಂದು ನಗರದ 51ನೇ ವಾರ್ಡಿನಲ್ಲಿ ಪಾದಯಾತ್ರೆ ನಡೆಸಿ ಜನರ ಅಹವಾಲುಗಳನ್ನು ಆಲಿಸಿದರು.

ಮೈಸೂರಿನ ರಾಮಾನುಜ ರಸ್ತೆಯಲ್ಲಿ ಚರಂಡಿಗೆ ಕಲ್ಲು ಹಾಸು ಹಾಕುವ ಕೆಲಸ ಸಾಗಿದ್ದು ಶಾಸಕರು ವೀಕ್ಷಿಸಿದರು.

ರಾಮಾನುಜ ರಸ್ತೆಯಲ್ಲಿ ಹಲವಾರು ತಿಂಗಳುಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಸಾರ್ವಜನಿಕರು ಜನರಿಗೆ ತೊಂದರೆಯಾಗುತ್ತಿದೆ ಎಂದು ಈ ವೇಳೆ ನಾಗರೀಕರು ಶಾಸಕರಲ್ಲಿ ದೂರುಗಳನ್ನು ನೀಡಿದರು.

ಕಾಮಗಾರಿ ಕೆಲಸ ಆಮೆ ಗತಿಯಲ್ಲಿ ಸಾಗಿರುವುದರಿಂದ ಇಲ್ಲಿ ಓಡಾಡಲು ಬಹಳ ತೊಂದರೆಯಾಗುತ್ತಿದೆ ಜೊತೆಗೆ ಈ ಭಾಗದಲ್ಲಿ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್ ಬಾರದೆ ಪ್ರಯಾಣಿಕರಿಗೂ ಕಷ್ಟವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಮಳೆ ಸಮೀಪಿಸಿದರೆ ಚರಂಡಿಯಲ್ಲಿ ಕಸ ಸೇರಿಕೊಂಡು ನೀರು ಸರಾಗವಾಗಿ ಹರಿಯದೆ ಮನೆಗಳವರಿಗೆ ತೊಂದರೆಯಾಗುತ್ತದೆ ಹಾಗಾಗಿ ಕಾಮಗಾರಿಯನ್ನು ಬೇಗ ಮುಗಿಸಿ ಕೊಡಬೇಕೆಂದು ಮನವಿ ಮಾಡಿದರು.


Share this with Friends

Related Post