Mon. Dec 23rd, 2024

ಒದ್ದೆ ಕೈಯಲ್ಲಿ ಮೊಬೈಲ್ ಚಾರ್ಜ್: ಶಾಕ್ ಹೊಡೆದು ಬಾಲಕಿ ಸಾವು

Share this with Friends

ಹೈದರಾಬಾದ್, ಜು.28: ಒದ್ದೆ ಕೈನಲ್ಲಿ ಕರೆಂಟ್ ಗೆ ಸಂಬಂಧಿಸಿದ ಯಾವುದೇ‌ ವಸ್ತುಗಳನ್ನು ಮುಟ್ಟಿದರೆ ಶಾಕ್ ಹೊಡೆಯುವುದು ಖಚಿತ.ಇದಕ್ಕೆ ಹೈದರಾಬಾದ್ ನಲ್ಲಿ ಅಪ್ಪಟ ಉದಾಹರಣೆ ಇದೆ.

ಇಂತಹ ಅವಘಡ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲಿ ಎಂಬ ಗ್ರಾಮದಲ್ಲಿ ನಡೆದಿದೆ.

ಒದ್ದೆ ಕೈಯಲ್ಲಿ ಬಾಲಕಿ ಮೊಬೈಲ್ ಚಾರ್ಜ್ ಮಾಡಲು ಹೋದಾಗ ವಿದ್ಯುತ್ ಶಾಕ್ ಆಗಿ ಮೃತಪಟ್ಟಿದ್ದಾಳೆ.

ಖಮ್ಮಂ ಜಿಲ್ಲೆಯ ಚಿಂತಕಣಿ ಮಂಡಲದ ಮಟ್ಕೆಪಲ್ಲಿ ನಾಮವರಂ ಗ್ರಾಮದ ಕಟಿಕಳ ರಾಮಕೃಷ್ಣ ದಂಪತಿ ಮಗಳು ಅಂಜಲಿ ಕಾರ್ತಿಕಾ (9) ಮೃತ ದುರ್ದೈವಿ

ಅಂಜಲಿ ತನ್ನ ತಂದೆಯಿಂದ ಮೊಬೈಲ್ ಫೋನ್ ತೆಗೆದುಕೊಂಡು ವೀಡಿಯೊಗಳನ್ನು ನೋಡಿದ್ದಾಳೆ ಆಗ ಮೊಬೈಲ್ ಚಾರ್ಜ್ ಮುಗಿದ ಕಾರಣ ಚಾರ್ಜ್ ಮಾಡಲು ಹೋಗಿದ್ದಾಳೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದು‌ ಕೆಳಗೆ ಬಿದ್ದಿದ್ದಾಳೆ.

ತಕ್ಷಣ ಬಾಲಕಿಯನ್ನು ಪೋಷಕರು ಗ್ರಾಮದ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.

ಇದೆಂತಹ ಅನ್ಯಾಯದ ಸಾವು ಎಂದು ಅಂಜಲಿ ಅಕ್ಕ,ಪಕ್ಕದ ಮನೆಯವರು ಮಮ್ಮಲ ಮರುಗಿದರೆ ಬಾಲಕಿಯ ತಂದೆ,ತಾಯಿ ದುಃಖದ ಕಟ್ಟೆ ಒಡೆದಿದೆ.


Share this with Friends

Related Post