Wed. Jan 8th, 2025

ಕೇಂದ್ರ ಕಾರಾಗೃಹ ಸಜಾಖೈದಿ ಬಳಿ ಮೊಬೈಲ್ ಫೋನ್ !

Share this with Friends

ಮೈಸೂರು,ಏ.15: ಮೈಸೂರು ಕೇಂದ್ರ ಕಾರಾಗೃಹದಲ್ಲಿನ ಸಜಾ ಖೈದಿ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ.

ಸಜಾಬಂಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ವಸೀಂ ಪಾಷಾ ಬಳಿ ಮೊಬೈಲ್ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ವಸೀಂ ಪಾಷಾ ಹಲವು ದಿನಗಳಿಂದಲೂ ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ಅನುಮಾನವಿದ್ದು,ಇದನ್ನು ಪತ್ತೆ ಹಚ್ಚಲು ತಂತ್ರ ಹೂಡಿದ ಕಾರಾಗೃಹ ಪೊಲೀಸರು ಕಡೆಗೆ ಆತನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಈ ಸಂಭಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮೊಬೈಲ್ ಫನ್ ಈತನಿಗೆ ಹೇಗೆ ಬಂತು,ಯಾರು ಕೊಟ್ಟರು ಎಂಬಿತ್ಯಾದಿ ಕುರಿತು ತನಿಖೆ ನಡೆಸಲಾಗುತ್ತಿದೆ.


Share this with Friends

Related Post