Thu. Mar 5th, 2026

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕ್ಷಯ ರೋಗ ಪತ್ತೆಗೆ ಅತ್ಯಾಧುನಿಕ ಯಂತ್ರ ಅಳವಡಿಕೆ

Share this with Friends

ಬೆಂಗಳೂರು:ಆರಂಭಿಕ ಹಂತದಲ್ಲಿಯೇ ಕ್ಷಯ ರೋಗ ಗುರುತಿಸಲು ಸಾಧ್ಯವಿರುವ ಅತ್ಯಾಧುನಿಕ ಕ್ಷಯ ಪರೀಕ್ಷಾ ಯಂತ್ರ(ಕಾರ್ಟ್ರಿಡ್ಜ್-ಆಧಾರಿತ ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್)ದ ಸದುಪಯೋಗಪಡಿಸಿಕೊಂಡು ಕ್ಷಯ ಮುಕ್ತ ರಾಜ್ಯ ಮಾಡುವ ಆರೋಗ್ಯ ಇಲಾಖೆಯ ಪ್ರಯತ್ನಕ್ಕೆ ಸಹಕರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಷಯ ಪರೀಕ್ಷಾ ಯಂತ್ರವನ್ನು (CBNAAT) ಸಾರ್ವಜನಿಕರ ಉಪಯೋಗಕ್ಕೆ ಚಾಲನೆ ನೀಡಿ ಮಾತಮಾಡಿದ ಅವರು, ಒಟ್ಟು ಏಳು ಯಂತ್ರಗಳನ್ನು Syngenta India pvt ltd ಕಂಪನಿ ತನ್ನ ಸಿಎಸ್ಆರ್ ಹಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಸುಮಾರು 1.5 ಕೋಟಿ ಮೊತ್ತದ 7 ಯಂತ್ರಗಳನ್ನು ನೀಡಿದೆ. 3 ಯಂತ್ರಗಳನ್ನು ವಿಜಯನಗರ ಜಿಲ್ಲೆಗೆ, 3 ಯಂತ್ರಗಳನ್ನು ಕೋಲಾರ ಜಿಲ್ಲೆಗೆ ನೀಡಲಾಗಿದ್ದು, ಒಂದನ್ನು ಕೆಸಿ ಜನರಲ್ ಆಸ್ಪತ್ರೆಗೆ ನೀಡಲಾಗಿದೆ ಎಂದು ತಿಳಿಸಿದರು.

ಅತ್ಯಂತ ನಿಖರ ಫಲಿತಾಂಶ ನೀಡುವ ಈ ಯಂತ್ರಗಳಿಂದ ಕ್ಷಯ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯ.  ಮೈಕ್ರೋಸ್ಕೋಪಿಕ್ ಪರೀಕ್ಷೆಯಲ್ಲಿ ಕೆಲವೊಮ್ಮೆ ಆರಂಭಿಕ ಹಂತದಲ್ಲಿ ರೊಗ ಪತ್ತೆ ಸಾಧ್ಯವಾಗದೆ ರೋಗಿಗೆ ಸಮಸ್ಯೆ ಆಗುತ್ತಿತ್ತು ಮತ್ತು ಈ ವಿಧಾನದಲ್ಲಿ 10,000/ml ಬೆಸಿಲಿಯನ್ ಇದ್ದರೆ ಮಾತ್ರ ರೋಗವನ್ನು ಗುರುತಿಸಬಹುದಾಗಿದ್ದು,ಅದಕ್ಕೂ ಕಡಿಮೆ ಇದ್ದಾಗ ಗುರುತಿಸುವುದು ಕಷ್ಟ ಆಗುತ್ತಿತ್ತು. CBNAAT ಯಂತ್ರದಲ್ಲಿ137/ml ಬೆಸಲಿಯನ್  ಇದ್ದಾಗಲೂ ಪತ್ತೆಹಚ್ಚಬಹುದಾಗಿದೆ ಎಂದರು.

ಕೇವಲ 90 ನಿಮಿಷದಲ್ಲಿ ಕ್ಷಯ ರೋಗಾಣು ಪತ್ತೆ ಹಚ್ಚಲು ಸಾಧ್ಯ. ಸಾರ್ವಜನಿಕರು ಇದರ ಉಪಯೋಗ ಪಡೆದು ಕ್ಷಯ ಮುಕ್ತ ರಾಜ್ಯ ಮಾಡುವ ಇಲಾಖೆಯ ಪ್ರಯತ್ನಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಈ ವೇಳೆ ಆಸ್ಪತ್ರೆಯ ಆಡಿಳಿತಾಧಿಕಾರಿಗಳು, ವೈದ್ಯರುಗಳು, Sysgenta ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


Share this with Friends

Related Post