Tue. Dec 24th, 2024

ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ : ಬಿ ಎಮ್ ರಘು

Share this with Friends

ಮೈಸೂರು,ಮಾ.5: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ ಮತ್ತೆ ಮೋದಿ ಪ್ರಧಾನಮಂತ್ರಿ ಯಾಗುವುದು ಖಚಿತ ಎಂದು ರಘು ವಿಶ್ವಾಸ ವ್ಯಕ್ತಪಡಿಸಿದರು.

ನಾರಿ ಶಕ್ತಿ ವಂದನೆ ಯಾತ್ರೆ ಅಭಿಯಾನ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಬೈಕ್ ಜಾಥಾ ವೇಳೆ ಅವರು ಮಾತನಾಡಿದರು.

ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ , ರಾಷ್ಟ್ರದ ಅಭಿವೃದ್ಧಿಯ ಜೊತೆಗೆ ದೇಶದ ರಕ್ಷಣೆ ಮಾಡಿದ್ದಾರೆ, ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಹೇಳಿದರು

ಜನತಾನಗರ ಬಿಸಿಲುಮಾರಮ್ಮ ವೃತ್ತದಿಂದ ಪ್ರಾರಂಭವಾದ ಜಾಥ ಬೋಗಾದಿ ಗ್ರಾಮದ ಗಣಪತಿ ದೇವಸ್ಥಾನದ ವರೆಗೂ ಮಹಿಳೆಯರ ಭಾರತ್ ಮಾತಾ ಕೀ ಜೈ, ನರೇಂದ್ರ ಮೋದಿ ಕೀ ಜೈ, ನಾರಿ ಶಕ್ತಿ ದೇಶದ ಶಕ್ತಿ, ಘೋಷಣೆಗಳು ರಸ್ತೆಯುದ್ಧಕ್ಕೂ ಮೊಳಗಿತು.

ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾರಾಜು, ಹಿರಿಯ ಮುಖಂಡರಾದ ಗೋಪಾಲ್ ರಾವ್,ಕೆ ಎಂ ಶಂಕರ್, ಶ್ರೀನಿವಾಸ್,ಮಂಜುಳಾ,ನಾರಾಯಣ,ಕ್ಷೇತ್ರ ಅಧ್ಯಕ್ಷರಾದ ಪೈ ಟಿ ರವಿ, ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ಪ್ರಧಾನಕಾರ್ಯದರ್ಶಿಗಳಾದ, ಹೇಮಂತ್, ಈರೇಗೌಡ, ಶಿವು ಚಿಕ್ಕಕಾನ್ಯ, ಸೋಮಶೇಖರ್, ಲಕ್ಷ್ಮಿ ಕಿರಣ್, ಹೆಚ್ ಜಿ ರಾಜಮಣಿ,ಜಾನ್ಸಿರಾಣಿ,ವಿಜಯ ಮಂಜುನಾಥ್,ಗೀತಾಮಹೇಶ್, ವಿನುತಾ,ಕಲಾವತಿ, ರಾಮಬಾಯಿ, ಲಲಿತ, ಅನಿತಾ, ಜೀವಿತಾ, ಶಾಲಿನಿ, ನೇಹಾ ನಯನ,ಸುಮಾ, ರಾಧಾಮುತಲೀಕ್, ಹಿರಿಯಣ್ಣ,ಪ್ರತಾಪ್, ರವಿ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post