Fri. Jan 10th, 2025

ಜೂನ್ 9 ರ ಸಂಜೆ 6 ಗಂಟೆಗೆ ಮೋದಿ ಪ್ರಮಾಣ ವಚನ:ಜೋಶಿ

Share this with Friends

ನವದೆಹಲಿ,ಜೂ.7: ನರೇಂದ್ರ ಮೋದಿ ಅವರು ಜೂನ್ 9 ಭಾನುವಾರ ಸಂಜೆ 6 ಗಂಟೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪ್ರಹ್ಲಾದ‌ ಜೋಶಿ ತಿಳಿಸಿದ್ದಾರೆ.

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಎನ್‌ಡಿಎ ಸಂಸದರ ಸಭೆ ವೇಳೆ ಪ್ರಹ್ಲಾದ್‌ ಜೋಶಿ
ಮಾಧ್ಯಮದವರೊಂದಿಗೆ ಮಾತನಾಡಿ,ಮೋದಿ ಅವರು
ಜೂನ್‌ 9 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಆರಂಭದಲ್ಲಿ ಶನಿವಾರ ಪ್ರಮಾಣ ವಚನ ನಡೆಯಲಿದೆ ಎಂದು ವರದಿಯಾಗಿತ್ತು,ಆದರೆ ಭಾನುವಾರ ಪ್ರಮಾಣ ವಚನ ನಡೆಯುವುದು ಖಚಿತ ಎಂದು ಅಧಿಕೃತವಾಗಿ ತಿಳಿಸಲಾಗಿದೆ.


Share this with Friends

Related Post