ಮೈಸೂರು,ಫೆ.25: ಪ್ರಧಾನಮಂತ್ರಿ ಮೋದಿ ಅವರು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೈಸೂರು ವಿಭಾಗದಲ್ಲಿ 12 ರೈಲ್ವೆ ನಿಲ್ದಾಣಗಳು, ಮತ್ತು ಒಂದು ರಸ್ತೆ ಕೆಳ ಸೇತುವೆಗೆ ಶಂಕುಸ್ಥಾಪನೆ ನೆರವೇರಲಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪ ಅಗರ್ವಾಲ್ ಅವರು,ನಾಳೆ (ಫೆ. 26) ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳು ಶಂಕುಸ್ಥಾಪನೆ ನೆರವೇರಲಿದ್ದಾರೆ ಎಂದು ಹೇಳಿದರು.
ಒಟ್ಟು 367.24 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ 12 ರೈಲ್ವೆ ನಿಲ್ದಾಣಗಳು ಮತ್ತು ಒಂದು ಕೆಳಸೇತುವೆಗೆ ಪ್ರಧಾನಮಂತ್ರಿಗಳು ಶಂಕುಸ್ಥಾಪನೆ ನೆರವೇರಲಿದ್ದಾರೆ ಎಂದು ಹೇಳಿದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಮೈಸೂರು ವಿಭಾಗದ 12 ನಿಲ್ದಾಣಗಳಾದ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಮೈಸೂರು, ರಾಣೆಬೆನ್ನೂರು, ಸಾಗರ ಜಂಬಗಾರು, ಸಕಲೇಶಪುರ, ಶಿವಮೊಗ್ಗ ಟೌನ್, ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ ಮತ್ತು ತಿಪಟೂರಿನ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲ ಹೆಚ್ಚಿಸಲು ಆಧುನಿಕ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಒಟ್ಟು 367.24 ಕೋಟಿ ರೂ ವೆಚ್ಚದಲ್ಲಿ 12 ರೈಲ್ವೆ ನಿಲ್ದಾಣಗಳು ಮತ್ತು ಒಂದು ಕೆಳಸೇತುವೆ ನಿರ್ಮಾಣವಾಗಲಿದೆ ಎಂದು ಹೇಳಿದರು.
ಇದಲ್ಲದೆ, ಈ ಯೋಜನೆಯಲ್ಲಿ ನಿಲ್ದಾಣದ ಸಂರಚನೆಗಳನ್ನು ನವೀಕರಿಸುವುದು, ಎರಡೂ ಕಡೆಗಳಲ್ಲಿ ಸುತ್ತಮುತ್ತಲಿನ ನಗರ ಪ್ರದೇಶಗಳೊಂದಿಗೆ ನಿಲ್ದಾಣಗಳನ್ನು ಸಂಯೋಜಿಸುವುದು, ಬಹುವಿಧ ಸಂಪರ್ಕಗಳನ್ನು ಉತ್ತೇಜಿಸುವುದು, ಅಂಗವಿಕಲ (ದಿವ್ಯಾಂಗ್ಟನ್) ವ್ಯಕ್ತಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು, ಸುಸ್ಥಿರ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಅಳವಡಿಸುವುದು, ನಿಲುಭಾರ (ಜಲ್ಲಿಕಲ್ಲು) ಇಲ್ಲದ ಹಳಿಗಳನ್ನು ಪರಿಚಯಿಸುವುದು, ಅಗತ್ಯವಿದ್ದಾಗ ಮತ್ತು ಸುಧಾರಣೆಗಳ ಕಾರ್ಯಸಾಧ್ಯತೆ ಪರಿಗಣಿಸಿ ಅಗತ್ಯವಿದ್ದೆಡೆ ‘ಬಹುಮಹಡಿ ಪ್ಲಾಜಾ ಒದಗಿಸಲು ಮುಂದಾಗಿದ್ದೇವೆ ಎಂದು ಶಿಲ್ಪ ಅಗರ್ವಾಲ್
ತಿಳಿಸಿದರು.