Tue. Dec 24th, 2024

ದೇವಾಲಯಗಳಿಂದ ಬರುವ ಹಣ ಅವುಗಳ ಅಭಿವೃದ್ಧಿಗೇ:ರಾಮಲಿಂಗಾರೆಡ್ಡಿ ಸ್ಪಷ್ಟನೆ

Share this with Friends

ಬೆಂಗಳೂರು, ಫೆ.17: ದೇವಾಲಯಗಳಿಂದ ಸಂಗ್ರಹವಾಗುವ ಹಣವನ್ನು ಆಯಾ ದೇವಾಲಯಗಳ ಅಭಿವೃದ್ಧಿಗೇ ವೆಚ್ಚ ಮಾಡಲಾಗುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ರಾಜ್ಯದ ಮುಜರಾಯಿ ದೇವಾಲಯಗಳಿಂದ ಬರುವ ಆದಾಯವನ್ನು ಇತರೆ ಧರ್ಮ ದವರ ಕಲ್ಯಾಣಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು,ಜತೆಗೆ ಕೆಲ ದೇವಾಲಯಗಳು ಮತ್ತು ಅವುಗಳಿಂದ ಬರುವ ಆದಾಯದ ಪಟ್ಟಿಯೊಂದನ್ನು ಪ್ರಕಟಿಸಿ ಟೀಕಿಸಿದ್ದರು.

ಆ ವ್ಯಕ್ತಿಯ ಈ ಟೀಕೆಗೆ ರಾಮಲಿಂಗ ರೆಡ್ಡಿ ಅವರು ಸರಿಯಾದ ತೆರುಗೇಟು ನೀಡಿದ್ದಾರೆ.

ಚುನಾವಣೆ ಸಮಯ ಬಂದಾಗೆಲ್ಲ ನಮ್ಮ ಸರ್ಕಾರದ ಮೇಲೆ ಈ ರೀತಿ ಗೂಬೆ ಕೂರಿಸುವ ಕೆಲಸವಾಗುತ್ತಿದೆ ಸಾರ್ವಜನಿಕರು ಇಂತಹ ಹೇಳಿಕೆಗಳನ್ನು ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಮುಜರಾಯಿ ಇಲಾಖೆ ಯಾವುದೇ ಕಾರಣಕ್ಕೂ ರಾಜ್ಯದ ದೇವಾಲಯಗಳ ಹುಂಡಿಯಿಂದ ಮತ್ತು ದೇವಸ್ಥಾನಗಳಿಂದ ಸಂಗ್ರಹವಾಗುವ ಹಣದಲ್ಲಿ ಒಂದು ಪೈಸೆಯನ್ನು ಇತರೆ ಧರ್ಮೇಯರ ಅಭಿವೃದ್ಧಿಗಾಗಿ, ಕಲ್ಯಾಣಕ್ಕಾಗಲಿ ಖಂಡಿತ ವೆಚ್ಚ ಮಾಡುತ್ತಿಲ್ಲ ಎಂದು ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಮುಜರಾಯಿ ಸಚಿವರು ತಿಳಿಸಿದ್ದಾರೆ.

ರಾಜ್ಯದ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸವನ್ನು ಯಾರು ಕೂಡ ಮಾಡಬಾರದು. ಪ್ರತ್ಯಕ್ಷ ನೋಡಿದರೂ ಪ್ರಾಮಾಣಿಸಿ ನೋಡಬೇಕು ಎಂಬ ಗಾದೆ ಇದೆ.

ಮೊದಲು ಹೀಗೆ ಟೀಕಿಸುವವರು ಇಂತಹವುದನ್ನು ತಿಳಿದುಕೊಳ್ಳಬೇಕು ಇಂತಹ ಗಾದೆಯನ್ನು ಅರಿತುಕೊಳ್ಳಬೇಕು, ಮುಜರಾಯಿ ಇಲಾಖೆಯಿಂದ ಯಾವುದೇ ದೇವಾಲಯದ ಹಣವನ್ನು ಅನ್ಯತಾ ವೆಚ್ಚ ಮಾಡುತ್ತಿಲ್ಲ ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.


Share this with Friends

Related Post