Mon. Dec 23rd, 2024

ಪ್ರತಿ ತಿಂಗಳು ವಿಭಿನ್ನ ರೀತಿಯಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ ಆಯೋಜನೆ : ಸಂಸ್ಥಾಪಕ ಟ್ರಸ್ಟಿ ಅನಿತಾ

Share this with Friends

ಬೆಂಗಳೂರು : ಮಂದಗೆರೆ ಕಲೆ – ಸಾಹಿತ್ಯ -ಸಾಂಸ್ಕೃತಿಕ ಪ್ರತಿಷ್ಠಾನ ( ರಿ ) ವತಿಯಿಂದ ಪಿ.ಕಾಳಿಂಗರಾವ್ ರವರ ಸಂಸ್ಕರಣಾರ್ಥವಾಗಿ ಸುಗಮ ಸಂಗೀತ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಬೆಂಗಳೂರಿನ ಬಾಪು ವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಸುಗಮ ಸಂಗೀತ ಗಾಯಕರು ಹಾಗು ಸುಗಮ ಸಂಗೀತದ ನಿರ್ದೇಶಕರಾದ ಶ್ರೀನಿವಾಸ ಉಡುಪರವರು ಮಾತನಾಡಿ ಪ್ರಸಿದ್ಧ ಕವಿಗಳ ಭಾವನೆಯನ್ನು ಜನರಿಗೆ ತಲುಪಿಸುವ ಮೂಲ ಆಶಯ ಸುಗಮ ಸಂಗೀತದಾಗಿದೆ ಎಂದರು.ಹಾಗೆಯೇ ಬಾಂಬೆಯಿಂದ ದಕ್ಷಿಣ ಭಾರತಕ್ಕೆ ಸುಗುಮ ಸಂಗೀತ ಆಕಾಶವಾಣಿಯ ಮೂಲಕ ಬಂದಿತು ಎಂದರು.

ಉದಯವಾಯಿತು ಚೆಲುವ ಕನ್ನಡ ನಾಡು ಇಳಿದು ಬಾ ತಾಯಿ ಇಳಿದು ಬಾ ಸುಗಮ ಸಂಗೀತಗಳು ಹೆಚ್ಚು ಜನಪ್ರಿಯವಾದವು ಎಂದು ತಿಳಿಸಿದರು. ಸತೀಶ್ ಕಂಬಾವಿ ಮಠ ಮಾತನಾಡಿ ಪಿ ಪಿ ಕಾಲಿಂಗರಾವ್ ರವರ ನೂರನೇ ಜನ್ಮ ದಿನದ ಪ್ರಯುಕ್ತ ಸುಂದರ ಕಾರ್ಯಕ್ರಮವನ್ನು ಆಯೋಜಿಸಿರುವ ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ( ರಿ ) ಸಂಸ್ಥಾಪಕರಿಗೆ ಹಾಗೂ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಹಾಗೆಯೇ ಟಿ .ಕಾಳಿಂಗರಾವ್ ಸಲ್ಲಿಸಿದ ಸೇವೆಯನ್ನು ಗುರುತಿಸಿ ಜನಪದ ಸಂಗೀತ ರತ್ನ ಹಾಗೂ ಉದಯ ಕಾಲ ಕೋಗಿಲೆ ಪ್ರಶಸ್ತಿ ಬಂದಿದೆ ಎಂದರುಮುಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಂಸ್ಥಾಪಕ ಟ್ರಸ್ಟಿ ಅನಿತಾ ರವರು ಮಾತನಾಡಿ ರಾಜ್ಯದಲ್ಲಿ ಪ್ರಥಮ ಭಾರಿಗೆ ದಾಖಲೆಯ ಕನ್ನಡ ಕಾರ್ಯಕ್ರಮ ಮಾಸದಂಗಳದಲ್ಲಿ ಕವಿ ಬೆಳಕು ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಇಂದಿನ ಎರಡನೇ ಕಾರ್ಯಕ್ರಮ ಪಿ.ಕಾಳಿಂಗರಾವ್ ರವರ ಸಂಸ್ಕರಣಾರ್ಥವಾಗಿ ನಡೆಯುತ್ತಿದೆ.

ಭಾವಗೀತೆಯ ಹಕ್ಕಿಗೆ ಕಾವ್ಯನಮನದಲ್ಲಿ ಸುಮಾರು 50 ಕ್ಕೂ ಹೆಚ್ಚು ಕವಿಗಳು ಆಗಮಿಸಿರುವುದು ಕಾರ್ಯಕ್ರಮಕ್ಕೆ ಮೆರುಗು ತಂದಿದೆ ಎಂದರು ಇದೇ ರೀತಿ ಪ್ರತಿ ತಿಂಗಳು ಹೊಸದಾಗಿ ವಿಭಿನ್ನ ರೀತಿಯಲ್ಲಿಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ, ಕವಿಗಳಿಗೆ, ಹಾಗೂ ಸೇರಿದ ಪ್ರೇಕ್ಷಕರಿಗೆ ಸ್ವಾಗತ ಕೋರಿದರು ವ್ಯವಸ್ಥಾಪಕ ಟ್ರಸ್ಟಿ ರಾಮ್ ಕುಮಾರ್ ಮಾತನಾಡಿ ಮಾಸದಂಗಳದಲ್ಲಿ ಕವಿ ಬೆಳಕು ತಿಂಗಳ ಸಾಹಿತ್ಯ ಕವಿಗೋಷ್ಠಿ ನಿರಂತರವಾಗಿ ನಡೆಯುತ್ತಿದೆ ಎಂದರು ಹಾಗೆಯೇ ಮುಂದಿನ ತಿಂಗಳ ಕಾರ್ಯಕ್ರಮಕ್ಕೆ ಟ್ರಸ್ಟಿಯ ಸದಸ್ಯರಾದ ಮಧುರಾ ಗಾಂವ್ಕರ ಯಲ್ಲಾಪುರ,ಸುವರ್ಣ ಗಾಂವ್ಕರ ಗೀತಾ ಕೈಲ್ಕೆರೆ ರವರಿಗೆ ಮುಂದಿನ ತಿಂಗಳ ಕಾರ್ಯಕ್ರಮದ ಜವಾಬ್ದಾರಿ ವಹಿಸಿದರು.

ಕವಿಗೋಷ್ಠಿಯ ಅಧ್ಯಕ್ಷರಾದ ಚಲನಚಿತ್ರ ನಿರ್ದೇಶಕರು ಹಾಗೂ ಸಾಹಿತಿಗಳಾದ ಮಂಜು ಪಾಂಡವಪುರ ಮಾತನಾಡಿ ಎಲ್ಲಾ ಕವಿಗಳು ಉತ್ತಮವಾಗಿ ಭಾವಗೀತೆಯ ಕಾವ್ಯ ವಾಚನ ಮಾಡಿದ್ದೀರಿ, ಹಾಗೆಯೇ ಮುಂದಿನ ತಿಂಗಳು ಒಬ್ಬರು ಬರೆದ ಕವನಗಳನ್ನು ಮತ್ತೋಬ್ಬ ಕವಿ ವಾಚನ ಮಾಡುವಂತೆ ಸಲಹೆ ನೀಡಿದರು .ಕಾರ್ಯಕ್ರಮದ ನಿರೂಪಣೆಯನ್ನು ಲತಾ ಬಾರ್ಗವ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಹನಾರವರು ಸುಗಮ ಸಂಗೀತದ ಮೂಲಕ ಜನಮೆಚ್ಚುಗೆ ಪಡೆದರು ಸಾವಿತ್ರಮ್ಮ ಓಂಕಾರ್ ರವರು ಭಾಗವಹಿಸಿದ ಎಲ್ಲಾ ಕವಿಗಳ ರೇಖಾಚಿತ್ರ ಕಲಾ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸಿಂಹಾದ್ರಿ ,ವ್ಯವಸ್ಥಾಪಕ ಟ್ರಸ್ಟಿ ಚಂಪಾ ಚಿನಿವಾರ್, ಮಹೇಶ್ ಬೆಂಗಳೂರು, ಕವಿಗಳಾದ ಮಧುರಾ ಗಾಂವ್ಕರ ಯಲ್ಲಾಪುರ ‌ ಶ್ರೀದೇವಿ ಓಂಕಾರ್ ಗೀತಾ,ರಂಗನಾಥ್ , ಪಾರ್ವತಿ ಕಾರಂತ್,ಸುವರ್ಣಾ ಗಾಂವ್ಕರ ಮಲ್ಲಾಪುರ, ರುಕ್ಮಿಣಿ ಎಸ್ ನಾಯರ್,,ಮನೋರಮೆ ಇ. ಖಲೀಲ್ ,ದೊಡ್ಡಬಸಮ್ಮ( ಸುನೀತಾ ಲಕ್ಷ್ಮೀ ) ನಳಿನಾದ್ವಾರಕಾನಾಥ್ ,ಸಾವಿತ್ರಮ್ಮ ಓಂಕಾರ್,ತಾರಾ ನಂಜುಂಡಶಾಸ್ತ್ರೀ ,ಮಂಜುಳಾ ಪ್ರಸಾದ್,ಶಾಂತಿರೇಖಾ ಭಟ್, ಡಾ ನಂಜಪ್ಪ, ಮಮತ ಕೆ.ಎಸ್,ಪುಷ್ಪ.ಹೆಚ್.ಡಿ, ಡಾ ಮಮತಾ ಸರ್ಜಾಪುರ, ಗುಲಾಬಿ ಮೊಗೇರ,ನಾರಾಯಣ ಸ್ವಾಮಿ ಮಾಲೂರು ,ನಾಗೇಂದ್ರ ಜೋಡಿದಾರ್ ,ಲಕ್ಷ್ಮಿ ಜೋಡಿದಾರ್, ಶೋಭ ಶ್ರೀನಿವಾಸ್, ಚಂದನ್ ಕೃಷ್ಣ ‌ ,ಸುಮಲತಾ ಹೆಚ್ .ಎನ್.ಮಹಮದ್ ರಫೀ ಹೆಚ್ ಎನ್,ಷಪದ್ಮ ಮಂಜುನಾಥ್,ಕವಿತಾ ಅವನಿ, ಬ್ಯಾಡನೂರು ವೀರಭದ್ರಪ್ಪ ಶಿವಶರಣ ,ಎಸ್.ಮಧುಕರ್ ರಾವ್, ನೇತ್ರಾ ವಸಂತ ನಾಯ್ಕ ಹಾಗೂ ಇನ್ನಿತರ ಕೆಲವು ಗಣ್ಯರು ಉಪಸ್ಥಿತರಿದ್ದರು.


Share this with Friends

Related Post