ಮೈಸೂರು,ಜೂ.20: ಜೆಕೆ ಟೈರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 1300 ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಜೆಕೆ ಟೈರ್ಸ್ ಉಪಾಧ್ಯಕ್ಷ
ಈಶ್ವರ್ ರಾವ್ ಮಾರ್ಗದರ್ಶನದಲ್ಲಿ
ಲಯನ್ಸ್ ಬ್ಲಂಡ್ ಸೆಂಟರ್, ಜೀವಧಾರ ಸಂಸ್ಥೆ ಹಾಗೂ ಕೆ ಆರ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಗರುವಾರ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಿಐಐ ಮೈಸೂರು ಚಾಪ್ಟರ್‌ನ ಉಪಾಧ್ಯಕ್ಷ ಹಿರಿಯ ನಿರ್ದೇಶಕ ಸಂತೋಷ್ ಗುಂಡಪಿ ಶಿಬಿರ ಉದ್ಘಾಟಿಸಿ ಮಾತನಾಡಿ,
ಜೆಕೆ ಟೈರ್ಸ್ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಹರಿಶಂಕರ್ ಸಿಂಘಾನಿಯಾಜೀ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಪ್ರತೀ ವರ್ಷ ಸಂಸ್ಥೆಯ ಸಾವಿರಾರು ಹೆಚ್ಚು ಉದ್ಯೋಗಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ಮಾದರಿ ಕಾರ್ಯವಾಗಿದೆ,ಇದರಿಂದ ತುರ್ತು ಸಂದರ್ಭದಲ್ಲಿ ಹಲವಾರು ರೋಗಿಗಳ ಜೀವ ಉಳಿಸಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು
ಜೆಕೆ ಟೈರ್ಸ್ ಮತ್ತು ಇಂಡಸ್ಟ್ರೀಸ್‌ನ ಸೀನಿಯರ್ ಜಿಎಂ ಜಗದೀಶ್ ಆರ್ ಅವರು ಮಾತನಾಡಿ, ಕೈಗಾರಿಕೆಗಳಲ್ಲಿ ಈ ರೀತಿ ರಕ್ತದಾನ ಶಿಬಿರ ಆಯೋಜಿಸುವುದರಿಂದ ತುರ್ತು ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ರಕ್ತಬೇಕಾದಲ್ಲಿ ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಲಯನ್ಸ್ ಬ್ಲಂಡ್ ಸೆಂಟರ್ ಜೀವಧಾರ ಸಂಸ್ಥೆ ವ್ಯವಸ್ಥಾಪಕ ನಿದೇಶಕ ಎಸ್.ಇ. ಗಿರೀಶ್ ಮಾತನಾಡಿ, ಇಂಧೋರ್ ನಗರದಂತೆ ಮೈಸೂರಿನಲ್ಲಿಯೂ ಅಗತ್ಯವಿರುವ ಶೇಕಡ ನೂರರಷ್ಟು ರಕ್ತಪೂರೈಕೆಯಾಗುವಂತೆ ಮಾಡುವುದು ನಮ್ಮ ಜಿಲ್ಲೆಯ ಗುರಿಯಾಗಬೇಕಿದೆ ಎಂದು ಹೇಳಿದರು.
ಮುತ್ತಣ್ಣ,ಕೆ ಆರ್ ಆಸ್ಪತ್ರೆಯ ರಕ್ತನಿದಿ ಕೇಂದ್ರದ ಅಧಿಕಾರಿ ಕುಸುಮ, ಕ್ರೆಡಿಟ್ ಐ ಸಂಸ್ಥೆಯ ಮುಖ್ಯಸ್ಥರಾದ ಎಂ ಪಿ ವರ್ಷ, ರಾಜೀವ್ ಕುಮಾರ್, ಆನಂದ್ ಎಂ, ರವೀಂದ್ರ ಬಿ ಎಸ್, ನಾಗರಾಜ್, ಶ್ರೀನಾಥ್, ಅಶ್ವತ್ ರಾಜ್, ಡೊನಾಲ್ಡ್, ಪೂರ್ಣಿಮಾ, ಕಾರ್ಮಿಕ ವಿಭಾಗದ ಪದಾಧಿಕಾರಿಗಳಾದ ಚಂದನ್, ಚನ್ನಕೇಶವ, ಅಶೋಕ್, ದಾದಾಪೀರ್, ಶಿವಕುಮಾರ್, ಕಾಂತರಾಜು, ಮತ್ತು ರವಿಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.