Sat. Nov 2nd, 2024

ಮುಡಾ ಹಗರಣ: ಸಚಿವ‌ ಸಂಪುಟ ಸಭೆಯಲ್ಲಿ‌ ಸಿಎಂ ಸಿದ್ದು ಪರ ನಿರ್ಣಯ

Share this with Friends

ಬೆಂಗಳೂರು,ಆ.1: ಮುಡಾ ಹಗರಣ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಚಿವ ಸಂಪುಟ ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿಎಂಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನೋಟಿಸ್ ನೀಡಿದ್ದರು. ಆದರೆ ರಾಜ್ಯಪಾಲರ ನೋಟಿಸ್ ವಿರುದ್ಧ ಸುದೀರ್ಘ ನಿರ್ಣಯ ಮಾಡಿ ಸಿದ್ದರಾಮಯ್ಯ ಪರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸಿಎಂ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಸಿ, ಮೂಡ ದಾಖಲೆಗಳು ಅದರಲ್ಲೂ ಯಾರಿಗೆ ಸೈಟುಗಳು ಹಂಚಿಕೆಯಾಗಿದೆ ಎಂಬ ಸಂಪೂರ್ಣ ವಿವರ ತರಿಸಿಕೊಂಡು ಚರ್ಚಿಸಲಾಯಿತು.

ಕ್ಯಾಬಿನೆಟ್‌ನಲ್ಲಿ, ರಾಜ್ಯಪಾಲರು ನೋಟಿಸ್‌ನಲ್ಲಿ ಎತ್ತಿರುವ ಪ್ರಶ್ನೆಗಳನ್ನು ವಿರೋಧಿಸಿ ಸುದೀರ್ಘ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಾಮಾಜಿಕ ಕಾರ್ಯಕರ್ತರ ಟಿ.ಜೆ.ಅಬ್ರಹಾಂ ಎತ್ತಿರುವ ಆರೋಪಗಳಿಗೂ ದಾಖಲೆ ಸಮೇತ ಉತ್ತರ ಕೊಡಲು ನಿರ್ಣಯಿಸಲಾಯಿತು.

ರಾಜ್ಯಪಾಲರು ನೀಡಿರುವ ನೋಟಿಸ್ ಸರಿಯಿಲ್ಲ, ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯಬೇಕು, ಟಿ.ಜೆ.ಅಬ್ರಹಾಂ ಮಾಡಿರುವ ಎಲ್ಲ ದೂರುಗಳಿಗೂ ದಾಖಲೆಗಳ ಸಮೇತ ಉತ್ತರ ಕೊಡಲು ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.

ರಾಜ್ಯಪಾಲರ ಸ್ಥಾನ ರಾಜಕೀಯ ದುರುಪಯೋಗದ ಹಾದಿಯಲ್ಲಿರುವ ಬಗ್ಗೆ ಅನುಮಾನ ಮೂಡಿದೆ, ಪದ ಮತ್ತು ಒಕ್ಕಣಿಕೆ ಸೇರಿ ನೋಟಿಸ್ ವಾಪಸ್ ಪಡೆಯಬೇಕು ಇಲ್ಲವೇ ಕಾನೂನು ಹೋರಾಟ ನಡೆಸಲು ಸಿದ್ದರಾಗೋಣ ಎಂದು ಸಂಪುಟ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಧರಿಸಲಾಗಿದೆ.


Share this with Friends

Related Post