Mon. Dec 23rd, 2024

ಮುಡಾ‌ ಹಗರಣ;ಆಯುಕ್ತ ದಿನೇಶ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

Share this with Friends

ಮೈಸೂರು, ಜು.5: ಮುಡಾದಲ್ಲಿ ಸಾವಿರಾರು ಕೋಟಿ ಹಗರಣ ಎಸಗಿರುವ ಆಯುಕ್ತ ದಿನೇಶ್ ರನ್ನು ಅಮಾನತು ಮಾಡದೇ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಯ ಸೇನಾ ಪಡೆಯವರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಛೇರಿ ಮುಂಬಾಗ ಪ್ರತಿಭಟನೆ ನಡೆಸಿ ಕೂಡಲೇದಿ ನೇಶ್ ರನ್ನು ಅಮಾನತು ಮಾಡಿ, ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರವರು ಮೂಡಾ ಸ್ಥಾಪಿಸಿದ ಉದ್ದೇಶ, ಮೈಸೂರಿನ ಬಡ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಅನಾನುಕೂಲಸ್ಥರಿಗೆ ಕೈಗೆಟುವ ದರದಲ್ಲಿ ನಿವೇಶನಗಳು ಸಿಗಲಿ ಎಂದು. ಆದರೆ ಈಗ ಮೂಡಾ ರಿಯಲ್ ಎಸ್ಟೇಟ್ ಮಾಫಿಯಾಗಳ ಹಿಡಿತದಲ್ಲಿದೆ. 90 ಭಾಗದ ಮೂಡಾ ಸೈಟುಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳೇ ಕಬಳಿಸಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು.

ಈ ಮೂಡಾ ನಿವೇಶನಗಳ ಹಂಚಿಕೆ ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಹಗರಣವಾಗಿದೆ. ಸಿಎಂ ಆಪ್ತ ಬೈರತಿ ಸುರೇಶ್ ಎಲ್ಲಾ ತಿಳಿದು ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ, ಇದು ವ್ಯವಸ್ಥಿತವಾಗಿಯೇ ಸಿಎಂ ಹಾಗೂ ಆಪ್ತ ಭೈರವಿ ಭೈರತಿ ಸುರೇಶ್ ರವರ ಕೈವಾಡವಿರುವಂತೆ ಕಂಡುಬರುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಅದರಲ್ಲೂ 3500 ಸಾವಿರ ಕೋಟಿ ಹಗರಣ ನಡೆದಿದ್ದರೂ ಆಯುಕ್ತರಾಗಿದ್ದ ದಿನೇಶ್ ಮೇಲೆ ಕ್ರಮ ಕೈಗೊಳ್ಳದೆ, ಅಮಾನತು ಮಾಡಿ ಬಂಧಿಸಿ ವಿಚಾರಣೆಗೊಳಪಡಿಸದೆ, ಏನು ಆಗಿಲ್ಲವೆಂಬಂತೆ ಸುಲಭವಾಗಿ ಬೇರೆಡೆಗೆ ವರ್ಗಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ ಹಾಗೂ ಇದು ಸರ್ಕಾರದ ವೈಪಲ್ಯವನ್ನು ಹಾಗೂ ಸರ್ಕಾರವು ನೇರವಾಗಿ ಭಾಗಿಯಾಗಿರುವುದನ್ನು ತೋರಿಸುತ್ತದೆ ಎಂದು ಹೇಳಿದರು.

ಈ ಮೂಡಾ ಹಗರಣ ಬೆಳಕಿಗೆ ಬರಬೇಕಾದರೆ, ತಾರ್ತಿಕ ಅಂತ್ಯ ಕಾಣಬೇಕಾದರೆ ಪಾರದರ್ಶಕವಾಗಿ ಇದನ್ನು ಸಿಬಿಐಗೆ ವಹಿಸಬೇಕು, ನಮ್ಮ ಹೋರಾಟ ನ್ಯಾಯ ಸಿಗುವವರೆಗೆ ಮುಂದುವರೆಯುತ್ತದೆ. ಎಂದು ‌ಎಚ್ಚರಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಪ್ರಭು ಶಂಕರ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಪ್ರಜೀಶ್ ಪಿ, ಶಿವಲಿಂಗಯ್ಯ, ಶಾಂತರಾಜೇಅರಸ್, ನೇಹ, ಮಂಜುಳಾ, ವರಕೊಡು ಕೃಷ್ಣೆಗೌಡ, ಸಿಂಧುವಳ್ಳಿ ಶಿವಕುಮಾರ್, ನಾಗಣ್ಣ, ಕುಮಾರ್ ಗೌಡ, ಭಾಗ್ಯಮ್ಮ, ನಾರಾಯಣಗೌಡ, ಅನಿಲ್, ಹರೀಶ್, ರಾಮಕೃಷ್ಣೇಗೌಡ, ಗಿರೀಶ್, ಸೋಮಶೇಖರ್, ಪರಿಸರ ಚಂದ್ರು, ರಾಧಾಕೃಷ್ಣ, ಮಹದೇವ ಸ್ವಾಮಿ ನಂದಕುಮಾರ್, ಗೀತ ಗೌಡ, ಅಕ್ಬರ್, ರಾಮ ನಾಯಕ, ಪ್ರದೀಪ್, ಸ್ವಾಮಿ ಗೌಡ, ರವಿ, ದರ್ಶನ್ ಗೌಡ, ದಿನೇಶ್, ರಘು ಅರಸ್, ಗಣೇಶ್, ಕುಮಾರ್, ಸ್ವಾಮಿ ಗೌಡ ,ಶಂಕರ್ ಗುರು, ಶಿವನಾಯಕ್, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Share this with Friends

Related Post