Sat. Dec 28th, 2024

ಕೊಲೆ ಕೇಸಲ್ಲಿ ದರ್ಶನ್ :ನಂಬಲು ಕಷ್ಟವಾಗುತ್ತಿದೆ-ರಚಿತಾ ರಾಮ್

Share this with Friends

ಬೆಂಗಳೂರು, ಜೂ.18: ನಟ‌ ದರ್ಶನ್ ಬಂಧನ, ಅವರ ಮೇಲಿರುವ ಕೊಲೆ ಆರೋಪ ಕುರಿತು‌ ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ಖ್ಯಾತಿಯ ನಟಿ ರಚಿತಾ ರಾಮ್ ಪ್ರತಿಕ್ರಿಯಿಸಿದ್ದಾರೆ.

ಇನ್ಸಟಾಗ್ರಾಮ್ ನಲ್ಲಿ ರಚಿತಾ ರಾಮ್ ಒಂದು ನೋಟ್ ಹಾಕಿದ್ದಾರೆ.ಅದರ ಸಾರಾಂಶ ಹೀಗಿದೆ.

ಈ ನೋಟ್ ಅನ್ನ ನಾನು ನಟಿಯಾಗಿ ಅಲ್ಲ ಸಾಮನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ ಎಂದು ಪ್ರಾರಂಭಿಸಿ, ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನಿಡಲಿ ಎಂಬ ಪ್ರಾರ್ಥಿಸಿದ್ದಾರೆ.

ನಂತರ ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ,
ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು ಎಂದು ಬರೆದುಕೊಂಡಿದ್ದಾರೆ.

ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ನನಗೆ ಸ್ವಲ್ಪ ಕಷ್ಟವಾಗುತ್ತಿದೆ, ಏನಿದ್ದರೂ ಸತ್ಯ ಪೊಲೀಸರ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದು ನನ್ನ ನಂಬಿಕೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಮಿತ್ರರು ಈ ಕೇಸ್‌ ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತಿರಿ ಎಂದು ಆಶಿಸುತ್ತೇನೆ ಎಂದು ರಚಿತಾ ರಾಮ್ ಮನವಿ ಮಾಡಿದ್ದಾರೆ.


Share this with Friends

Related Post