ಮೈಸೂರು: ಮನಸ್ಸಿನ ಆರೋಗ್ಯಕ್ಕೆ ಸಂಗೀತ ಉತ್ತಮ ಎಂದು ಶಾಸಕ ಶ್ರೀವತ್ಸ ಹೇಳಿದರು.
ಕಲಾಭೂಮಿ ವತಿಯಿಂದ ಅಕ್ಟೋಬರ್ 20ರಂದು ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೆ ಹೂಟಗಳ್ಳಿ ಬಿ ಎನ್ ರಾವ್ ಸಭಾಂಗಣದಲ್ಲಿ ಸ್ವರ ಸಂಭ್ರಮ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಶಾಸಕ ಟಿ ಎಸ್ ಶ್ರೀವತ್ಸ ಬಿಡುಗಡೆಗೊಳಿಸಿ ಮಾತನಾಡಿದರು.
ಇಂದಿನ ಒತ್ತಡ ಮತ್ತು ಕಲುಷಿತ ವಾತಾವರಣದ ಜೀವನದಲ್ಲಿ ಸಂಗೀತ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಿದರು.
ಮನಸ್ಸಿನ ಆರೋಗ್ಯಕ್ಕೆ ಸಂಗೀತವೇ ಮದ್ದು,
ಸಂಗೀತದಿಂದ ಆರೋಗ್ಯ ವೃದ್ಧಿ
ಸಂಗೀತಕ್ಕೆ ಅಗಾಧ ಶಕ್ತಿಯಿದ್ದು, ಎಂಥವರನ್ನೂ ತಲೆದೂಗುವಂತೆ ಮಾಡುತ್ತದೆ. ಹೀಗಾಗಿ ಜುಗುಪ್ಸೆ ಎನಿಸಿದಾಗ ಸಂಗೀತ ಆಲಿಸುವ ಮೂಲಕ ಆರೋಗ್ಯ ಹೆಚ್ಚಿಸಿಕೊಳ್ಳಿ ಶ್ರೀವತ್ಸ ಸಲಹೆ ನೀಡಿದರು.
ಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರಾದ ಆಸ್ಕರ್ ಕೃಷ್ಣ ಮಾತನಾಡಿ,ಸ್ವರ ಸಂಭ್ರಮ ಕಾರ್ಯಕ್ರಮವು ಉದಯೋನ್ಮುಖ ಹಾಗೂ ಪರಿಣಿತ ಗಾಯಕ/ಗಾಯಕಿಯರಿಗೆ ಕನ್ನಡ ಚಿತ್ರರಂಗದ ಸಾಧಕರು, ಕಲಾವಿದರು ಹಾಗೂ ತಂತ್ರಜ್ಞರ ಸಮ್ಮುಖದಲ್ಲಿ ಹಾಡುವ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದರು.
ಇದು ರಾಜ್ಯ ಮಟ್ಟದ ಕರೋಕೆ ಗಾಯನ ಕಾರ್ಯಕ್ರಮ ವಾಗಿದ್ದು ವೇದಿಕೆಯಲ್ಲಿ ಹಾಡು ಹೇಳಲು ಇಚ್ಛಿಸುವವರು 9206694999/8660073484 ನಂಬರಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಬಿ ನಿಂಗರಾಜ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಪ್ರದೀಪ್ ಕುಮಾರ್, ಎಸ್ ಎನ್ ರಾಜೇಶ್, ಕಿಶೋರ್, ಕೀರ್ತಿ ಮತ್ತಿತರರು ಹಾಜರಿದ್ದರು.