Tue. Dec 24th, 2024

ನನ್ನ ಬಂಧನ ರಾಜಕೀಯ ಷಡ್ಯಂತ್ರ:ಹೆಚ್.ಡಿ.ರೇವಣ್ಣ

Share this with Friends

ಬೆಂಗಳೂರು,ಮೇ.5: ನನ್ನ ಬಂಧನ ರಾಜಕೀಯ ಷಡ್ಯಂತ್ರ, ಯಾವುದೇ ಪುರಾವೆ ಇಲ್ಲದೆ ಬಂಧಿಸಿದ್ದಾರೆ ಎಂದು
ಹೆಚ್‌.ಡಿ.ರೇವಣ್ಣ ಅಸಮಾಧಾನ ಪಟ್ಟರು.

ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಹೆಚ್‌.ಡಿ.ರೇವಣ್ಣ ಅವರನ್ನು ಆಸ್ಪತ್ರೆಗೆ ಕರೆತಂದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ, ಇದೊಂದು ರಾಜಕೀಯ ಪಿತೂರಿ, ಎಲ್ಲವನ್ನೂ ಹೇಳುವೆ, ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ ಎಂದು ತಿಳಿಸಿದರು.

ದುರುದ್ದೇಶದಿಂದ ಆರೋಪ ಮಾಡಿ ನನ್ನನ್ನು ಕರೆತರಲಾಗುದೆ, ನನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದರು.


Share this with Friends

Related Post