ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಇಂದು ಡಾ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿ ಕರೆ ನೀಡಿದ್ದ ಮೈಸೂರು ಬಂದ್ ಯಶಸ್ವಿಯಾಗಿದೆ.
ಮೈಸೂರು ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು
ಪ್ರಗತಿಪರ ಸಂಘಟನೆ, ಅಂಬೇಡ್ಕರ್ ಸಂಘ, ಪೌರ ಕಾರ್ಮಿಕರ ಸಂಘಗಳು ಪ್ರತಿಭಟನೆ ನಡೆಸಿದರು
ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.ಇನ್ನು ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ಹೋರಾಟಗಾರರು ಮುಚ್ಚಿಸುತ್ತಿದ್ದು ಕಂಡುಬಂದಿತು.
ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಬಳಿ ಜಮಾಯಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಕೇಂದ್ರ ಸಚಿವ ಅಮಿತ್ ಶಾ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಅಮಿತ್ ಶಾ ಪ್ರತಿಕೃತಿಯ ಅಣುಕು ಶವಯಾತ್ರೆ ಮಾಡಿ ನಂತರ ದಹನ ಮಾಡಿದರು.
ಕೆಲವು ಬಡಾವಣೆಗಳಲ್ಲಿ ಪ್ರತಿಭಟನೆ ಜೋರಾದ ನಂತರ ಶಾಲೆಗಳಿಗೆ ರಜೆ ನೀಡಲಾಗಿದೆ.
ಆಲನಹಳ್ಳಿ ಬಡಾವಣೆ ಸೇರಿದಂತೆ ಕೆಲವು ಕಡೆ ಬಸ್ ಓಡಿಸಿದ್ದಕ್ಕೆ ಚಾಲಕರೊಂದಿಗೆ ಸಂಘಟನೆಗಳವರು ಮಾತಿನ ಚಕಮಕಿ ನಡೆಸಿದ ಪ್ರಸಂಗ ಕೂಡಾ ನಡೆದಿದೆ.
ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಬೈಕ್ ನಲ್ಲಿ ಜಾಥಾ ನಡೆಸಿದ
ದಲಿತ, ಪ್ರಗತಿಪರ ಸಂಘಟನೆಗಳು ಬಂದ್ ಗೆ ಸಹಕರಿಸುವಂತೆ ಅಂಗಡಿ ಮುಂಗಟ್ಟು ಮಾಲೀಕರಲ್ಲಿ ಮನವಿ ಮಾಡಿದರು.
ಕೆಲ ಪ್ರತಿಭಟನಾಕಾರರು ಮೈಸೂರಿನ ಆರ್ ಎಸ್ ಎಸ್ ಕಚೇರಿಗೆ ನುಗ್ಗಲು ಯತ್ನಿಸಿದರು.ಈ ವೇಳೆ ಪೊಲೀಸರು ಅವರನ್ನು ರಸ್ತೆ ತೆಡೆದರು.
ಪ್ರತಿಭಟನೆ ವೇಳೆ ಶಿವರಾಂ ಅವರು ಮಾತನಾಡಿ ಕೇಂದ್ರ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.