Mon. Dec 23rd, 2024

ಸಿಎಂ, ಡಿಸಿಎಂ ಗಳಿಗೆ ಮೈಸೂರು ಬ್ರಾಹ್ಮಣ ಯುವ ವೇದಿಕೆ ಧನ್ಯವಾದ ಸಲ್ಲಿಕೆ

Share this with Friends

ಮೈಸೂರು, ಜು.31: ಕೆ.ಆರ್‌.ಎಸ್ ನಲ್ಲಿ ಮೈಸೂರು ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತರತ್ನ ದಿವಾನ್ ಸರ್.ಎಂ ವಿಶ್ವೇಶ್ವರಯ್ಯ ಅವರ‌ ಪ್ರತಿಮೆಗಳನ್ನು ಒಟ್ಟಿಗೆ ಸ್ಥಾಪಿಸಿರುವುದಕ್ಕೆ ಸಿಎಂ,ಡಿಸಿಎಂ ಗೆ‌ ಧನ್ಯವಾದ ಸಲ್ಲಿಸಲಾಗಿದೆ.

7-7-2019 ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಸ್ಥಳೀಯ ಶಾಸಕರಾಗಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಗುದ್ದಲಿಪೂಜೆ ನೆರವೇರಿಸಿ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು.

ನಂತರ ಈ ಇಬ್ಬರು ಮಹನೀಯರ ಪ್ರತಿಮೆಗಳ ಸ್ಥಾಪನೆ ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ತಡೆ ತರಲು ಕೆಲವು ಫಟ್ಟಭದ್ರ ವ್ಯಕ್ತಿಗಳು ಪ್ರಯತ್ನಿಸಿದ್ದರು,
ಸರ್.ಎಂವಿ ಅವರ ಪ್ರತಿಮೆಗೆ ಇಲ್ಲಸಲ್ಲದ ವಿಚಾರ ಮುಂದಿಟ್ಟು ವಿರೋಧಿಸಿದ್ದರು.

ಆದರೆ ಇವೆಲ್ಲದಕ್ಕೂ ತೆರೆ ಎಳೆದು ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಸರ್.ಎಂ ವಿಶ್ವೇಶ್ವರಯ್ಯ ಅವರ‌ ಪ್ರತಿಮೆಗಳನ್ನು
ಉದ್ಘಾಟನೆ ಮಾಡಿರುವುದು ಹಳೇ ಮೈಸೂರು ಭಾಗದ ಜನತೆಗೆ ಖುಷಿ ತಂದಿದೆ
ಎಂದು ಮೈಸೂರು ಬ್ರಾಹ್ಮಣ ಯುವ ವೇದಿಕೆ
ಉಪಾಧ್ಯಕ್ಷ ಕೆ.ಆರ್. ಎಸ್ ವಿಜಯಕುಮಾರ್ ತಿಳಿಸಿದ್ದಾರೆ.

ಅದಕ್ಕಾಗಿ ಸಿಎಂ ಮತ್ತು ಡಿ.ಸಿಎಂ ಅವರಿಗೆ ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.


Share this with Friends

Related Post