Tue. Dec 24th, 2024

ಮೈಸೂರು ವಿವಿ 104ನೇ ಘಟಿಕೋತ್ಸವ

Share this with Friends

ಮೈಸೂರು, ಮಾ.3: ಮೈಸೂರು ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವ ಇಂದು ನೆರವೇರಿತು.

ಮೈಸೂರಿನ ಕ್ರಾಫರ್ಡ್ ಭವನದಲ್ಲಿ ಇಂದು ಬೆಳಿಗ್ಗೆ ನಡೆದ ಮೈಸೂರು ವಿವಿಯ 104ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಹಿಸಿ ಮಾತನಾಡಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪದ್ಮಶ್ರೀ ಸಿ.ಎನ್. ಮಂಜುನಾಥ್ ಘಟಿಕೋತ್ಸವ ಭಾಷಣ ಮಾಡಿದರು.

ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಕುಲಪತಿ ಎನ್. ಕೆ. ಲೋಕನಾಥ್, ಕುಲಸಚಿವರಾದ ಶೈಲಜಾ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಮುಖ್ಯಮಂತ್ರಿ ಸಿ.ಎಂ ಕೃಷ್ಣ ಸೇರಿ ನಾಲ್ವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ಈ ಬಾರಿ 100 ಮಂದಿ ಪಿ ಎಚ್ ಡಿ ಪದವೀಧರರು, 6144 ಮಂದಿಗೆ ಸ್ನಾತಕೋತ್ತರ ಪದವಿ, 269 ಮಂದಿಗೆ ಸ್ನಾತಕೋತ್ತರ ಪದವಿ, ಸೇರಿದಂತೆ ಒಟ್ಟು 32,249 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರಧಾನ ಮಾಡಲಾಯಿತು.

ಪಿಹೆಚ್ಡಿ ಪದವಿ ಪಡೆದ 100 ಮಂದಿಯಲ್ಲಿ 55 ಪುರುಷರು 45 ಮಹಿಳೆಯರು. ಸ್ನಾತಕೋತ್ತರ ಪದವಿ ವಿಭಾಗದಲ್ಲಿ 2105 ಪುರುಷರು 4039 ಮಹಿಳೆಯರು, ಪದವಿ ವಿಭಾಗದಲ್ಲಿ 10099 ಪುರುಷರು, 15,910 ಮಹಿಳೆಯರು.

ಎಲ್ಲಾ ವಿಭಾಗಗಳಿಂದ ಒಟ್ಟು 32249 ಪದವಿ ಪಡೆದರು,ಅಲ್ಲದೆ 174
ಮಹಿಳೆಯರು ಸೇರಿದಂತೆ 252 ಅಭ್ಯರ್ಥಿಗಳು 436 ಪದಕ ಮತ್ತು 266 ನಗದು ಬಹುಮಾನ ಪಡೆದರು.

ಈ ಬಾರಿಯ ಘಟಿಕೋತ್ಸವದಲ್ಲಿ ಎಂ ಎಸ್ ಸಿ ರಾಸಾಯನ ಶಾಸ್ತ್ರ ವಿಭಾಗದ ಹೆಚ್ ಸಿ ಮೇಘನ 15 ಚಿನ್ನದ ಪದಕ ಹಾಗೂ 5 ನಗದು ಬಹುಮಾನ ಪಡೆದು ಎಲ್ಲರ ಮೆಚ್ಚುಗೆ ಗೆ ಪಾತ್ರರಾದರು.


Share this with Friends

Related Post