Fri. Dec 27th, 2024

ಭವಿಷ್ಯದ ಕ್ರಿಕೆಟ್ ಸ್ಟಾರ್ ಗಳನ್ನು ಅನ್ವೇಷಣೆ ಮಾಡಿದ ಮೈಸೂರು ವಾರಿಯರ್ಸ್

Share this with Friends

ಬೆಂಗಳೂರು,ಜು.12: ಮೈಸೂರು ವಾರಿಯರ್ಸ್ ಪ್ರತಿಭಾನ್ವೇಷಣೆ ಮೂಲಕ
ಭವಿಷ್ಯದ ಕ್ರಿಕೆಟ್ ಸ್ಟಾರ್ ಗಳನ್ನು ಆರಿಸಿಕೊಳ್ಳುತ್ತಿದೆ.

ಭಾರತದ ಪ್ರಮುಖ ಅಗರಬತ್ತಿ ತಯಾರಕರು ಮತ್ತು ಮೈಸೂರು ವಾರಿಯರ್ಸ್‌ ಮಾಲೀಕರಾದ ಎನ್‌ಆರ್ ಗ್ರೂಪ್, ಕರ್ನಾಟಕದಲ್ಲಿ ನಡೆಯುವ ಮುಂದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲು ಬೆಂಗಳೂರಿನಲ್ಲಿ ಯುವ ಆಟಗಾರರ ಪ್ರತಿಭಾನ್ವೇಷಣೆ ಮಾಡಿದ್ದಾರೆ.

ಇಲ್ಲಿ ಆಯ್ಕೆಯಾದ ಆಟಗಾರರು ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡಲಿದ್ದಾರೆ ಮತ್ತು ಕೆಎಸ್‌ಸಿಎ ಟಿ20 2024ರ ಹರಾಜಿನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಳ್ಳುವರು

ಮೊದಲ ಪ್ರತಿಭಾನ್ವೇಷಣೆಯು ಜುಲೈ 12 ರಂದು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಿತು.

ಇದರಲ್ಲಿ 124 ಮಧ್ಯಮ ವೇಗದ ಬೌಲರ್‌ಗಳು, 54 ಸ್ಪಿನ್ನರ್‌ಗಳು, 47 ಬ್ಯಾಟ್ಸ್‌ ಮನ್‌ಗಳು, 14 ಆಲ್‌ರೌಂಡರ್‌ಗಳು ಮತ್ತು 20 ವಿಕೆಟ್ ಕೀಪರ್‌ಗಳು ಸೇರಿದಂತೆ 260ಕ್ಕೂ ಹೆಚ್ಚು ಯುವ ಕ್ರಿಕೆಟಿಗರು ಭಾಗವಹಿಸಿದ್ದರು.

ಮುಂದಿನ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಜುಲೈ 18ರಂದು ಮೈಸೂರಿನಲ್ಲಿ ನಡೆಯಲಿದೆ. ಆ ಬಳಿಕ ಆಯ್ಕೆಯಾದ ಆಟಗಾರರ ಹೆಸರನ್ನು ಕೆಎಸ್‌ಸಿಎಗೆ ಶಿಫಾರಸು ಮಾಡಲಾಗುವುದು. ಜುಲೈ 25ರಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳಬಹುದಾಗಿದೆ.

ಹರಾಜು ಪ್ರಕ್ರಿಯೆಯ ಬಳಿಕ ತಂಡವನ್ನು ಸೇರುವ ಆಟಗಾರರು ಮೈಸೂರಿನಲ್ಲಿ ಒಂದು ವಾರಗಳ ಕಾಲ ಕಠಿಣ ತರಬೇತಿ ಪಡೆಯಲಿದ್ದಾರೆ.

ನಂತರ ಆಗಸ್ಟ್ 15ರಿಂದ ಸೆಪ್ಟೆಂಬರ್ 1ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುವರು.

ಈ ವೇಳೆ ಮೈಸೂರು ವಾರಿಯರ್ಸ್‌ನ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಅವರು ಮಾತನಾಡಿ,ಹಲವು ಯುವ ಪ್ರತಿಭೆಗಳನ್ನು ಗಮನಿಸಿದ್ದೇವೆ. ಹರಾಜು ಪ್ರಕ್ರಿಯೆಯ ಬಳಿಕ ಕೆಲವು ಪ್ರತಿಭೆಗಳು ನಮ್ಮ ತಂಡವನ್ನು ಸೇರಲಿದ್ದಾರೆ ಎಂದು ಸಂತಸ ಹಂಚಿಕೊಂಡರು.

ಮೈಸೂರು ವಾರಿಯರ್ಸ್‌ನ ಆಟಗಾರ ಶ್ರೀ ಕರುಣ್ ನಾಯರ್, ತಂಡದ ವ್ಯವಸ್ಥಾಪಕ ಸುರೇಶ್ ಎಂ ಆರ್ ಮತ್ತು ಮೈಸೂರು ವಾರಿಯರ್ಸ್‌ ಸಹಾಯಕ ಕೋಚ್ ವಿಜಯ್ ಮದ್ಯಾಳ್ಕರ್ ಉಪಸ್ಥಿತರಿದ್ದರು.


Share this with Friends

Related Post