Mon. Dec 23rd, 2024

ಸಿಲಿಕಾನ್ ಸಿಟಿಯಲ್ಲೂ ಚಾಪು ಮೂಡಿಸುತ್ತಿರುವ ನ್ಯಾಂಡೋಸ್

Share this with Friends

ಬೆಂಗಳೂರು, ಫೆ.16: ಬೆಂಕಿಯಲ್ಲಿ ಗ್ರಿಲ್ ಆದ ಪೆರಿಪೆರಿ ಚಿಕನ್‌ಗೆ ಪ್ರಸಿದ್ಧವಾದ ದಕ್ಷಿಣ ಆಫ್ರಿಕಾದ ಚೈನ್ ರೆಸ್ಟೋರೆಂಟ್ ನ್ಯಾಂಡೋಸ್ ಈಗ ಸಿಲಿಕಾನ್ ಸಿಟಿಯಲ್ಲೂ ಚಾಪು ಮೂಡಿಸುತ್ತಿದೆ.

ದಕ್ಷಿಣ ಆಫ್ರಿಕಾದ ಪ್ರಸಿದ್ಧ ಚೈನ್ ರೆಸ್ಟೋರೆಂಟ್ ಆಗಿರುವ ನ್ಯಾಂಡೋಸ್ ನಿನ್ನೆಯಷ್ಟೇ ಬೆಂಗಳೂರಿನ ಫೀನಿಕ್ಸ್ ಮಾಲ್‌ ಆಫ್ ಏಷ್ಯಾದಲ್ಲಿ ಹೊಸ ರೆಸ್ಟೋರೆಂಟ್ ಉದ್ಘಾಟನೆ ಮಾಡಿದೆ.

ಖ್ಯಾತ ನಟಿಯರಾದ ಐಂದ್ರಿತಾ ರೇ ಮತ್ತು ಹರ್ಷಿಕಾ ಪೂಣಚ್ಚ ಅವರು ನಗರದಲ್ಲಿನ ನ್ಯಾಂಡೋಸ್ ನ ಮೂರನೇ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದರು.

ನ್ಯಾಂಡೋಸ್ ಇಂಡಿಯಾದ ಸಿಇಒ ಸಮೀರ್ ಭಾಸಿನ್, ಮಾರ್ಕೆಟಿಂಗ್ ಮುಖ್ಯಸ್ಥರಾದ ಅನುಶ್ರೀ ಬೋಸ್, ಆಪರೇಷನ್ಸ್ ಡೈರೆಕ್ಟರ್ ಅಮಿತ್ ಭಯನಾ ಮತ್ತು ಮಾರ್ಕೆಟಿಂಗ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಅನ್ಶುಲ್ ಅಗರ್ವಾಲ್ ಉದ್ಘಾಟನಾ ಸಮಾರಂಭಕ್ಕೆ ಸಾಥ್ ನೀಡಿದರು.

ಈ ವೇಳೆ ನ್ಯಾಂಡೋಸ್ ಇಂಡಿಯಾದ ಸಿಇಒ ಸಮೀರ್ ಭಾಸಿನ್, ಮಾತನಾಡಿ ನಮ್ಮ ವಿಶ್ವಪ್ರಸಿದ್ಧ ಪೆರಿ-ಪೆರಿ ಚಿಕನ್ ಅನ್ನು ಉತ್ತರ ಬೆಂಗಳೂರಿನ ನಿವಾಸಿಗಳಿಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ‌‌ ಎಂದು ಖುಷಿಯಿಂದ ಹೇಳಿದರು.

ನಮ್ಮ ಚಿಕನ್ ಫ್ಲೇವರ್ ಗಳು ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ್ದರೂ, ಭಾರತೀಯ ಮಸಾಲೆ ಪ್ರಿಯರ ರುಚಿಗೆ ಅನುಗುಣವಾಗಿ ಮರು ರಚನೆ ಮಾಡಿದ್ದೇವೆ ತಿಳಿಸಿದರು.

ಆಫ್ರಿಕನ್ ಬರ್ಡ್ಸ್ ಐ ಮೆಣಸಿನಿಂದ ತಯಾರಿಸಿದ ನಮ್ಮ ಪೆರಿ-ಪೆರಿ ಸಾಸ್ ಅದ್ಭುತವಾಗಿದೆ ನಮ್ಮ ಎಲ್ಲಾ ಸಾಸ್‌ಗಳು, ಬೇಸ್ಟಿಂಗ್‌ಗಳು ಮತ್ತು ಮ್ಯಾರಿನೇಡ್‌ಗಳನ್ನು ತಾಜಾ ಮತ್ತು ನೈಜ ಪದಾರ್ಥಗಳಿಂದ ತಯಾರಿಸಲಾಗುತ್ತದೆ ಎಂದು ಹೇಳಿದರು.

ನಾವು ಯಾವುದೇ ಕೃತಕ ಫ್ಲೇವರ್ ಅಥವಾ ಬಣ್ಣಗಳನ್ನು ಬಳಸುವುದಿಲ್ಲ. ನಾವು ನಮ್ಮ ಚಿಕನ್ ನ ರುಚಿಯನ್ನು ಕಾಪಾಡಿಕೊಳ್ಳಲು ಮತ್ತು ಅದರ ಕೊಬ್ಬಿನಂಶವನ್ನು ಕಡಿಮೆ ಮಾಡಲು ಬೆಂಕಿಯಲ್ಲಿ ಸುಡುತ್ತೇವೆ, ನಿಯಮಿತವಾದ ಬೇಸ್ಟಿಂಗ್ ಬಳಕೆ ಅದನ್ನು ರಸಭರಿತವಾಗಿರಿಸುತ್ತದೆ ಎಂದು ಹೇಳಿದರು.

ನ್ಯಾಂಡೋಸ್ ಅಭಿಮಾನಿಗಳು ಈಗ ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿರುವ ನಮ್ಮ ಹೊಸ ರೆಸ್ಟೋರೆಂಟಿನಲ್ಲಿ ಪ್ರಸಿದ್ಧ ಸುಟ್ಟ ಪೆರಿ-ಪೆರಿ ಚಿಕನ್ ಸವಿಯಬಹುದಾಗುದೆ ಎಂದು ಆಹ್ವಾನ ನೀಡಿದರು ಸಮೀರ್ ಭಾಸಿನ್.

ನ್ಯಾಂಡೋಸ್ ನ ಹೊಸ ಔಟ್ಲೆಟ್ ಬೆಂಗಳೂರಿನ ಹೆಬ್ಬಾಳದ ಪ್ರಮುಖ ಸ್ಥಳದಲ್ಲಿದೆ.

ರೆಸ್ಟೋರೆಂಟ್ ದಕ್ಷಿಣ ಆಫ್ರಿಕಾದ ಕಲೆ ಮತ್ತು ಪೀಠೋಪಕರಣಗಳಿಂದ ವಿನ್ಯಾಸಗೊಂಡಿದೆ, ಸುಮಾರು 75 ಗ್ರಾಹಕರು ಕುಳಿತುಕೊಳ್ಳಬಹುದಾಗಿದ್ದು, 2262 ಚದರ ಅಡಿ ಜಾಗ ಹೊಂದಿದೆ.

ರೆಸ್ಟೋರೆಂಟ್ ಸೋಮವಾರದಿಂದ ಭಾನುವಾರದವರೆಗೂ ಬೆಳಿಗ್ಗೆ 11.30 ರಿಂದ ರಾತ್ರಿ 11.30 ರವರೆಗೂ ತೆರೆದಿರುತ್ತದೆ.


Share this with Friends

Related Post