ನಂಜನಗೂಡು,ಏ.11: ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ. 60 ರಷ್ಟು ಫಲಿತಾಂಶ ಬಂದಿದೆ. ಮೋಹನ್ ಕುಮಾರ್ ಎಂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
21 ವಿದ್ಯಾರ್ಥಿಗಳು ಉನ್ನತ ಶ್ರೇಣಿ , 211 ಪ್ರಥಮ ಶ್ರೇಣಿ ,101 ದ್ವಿತೀಯ ಶ್ರೇಣಿ , 61 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ಶೇ. 73, ವಿಜ್ಞಾನ ಶೇ. 61 ಮತ್ತು ಕಲಾ ವಿಭಾಗದಲ್ಲಿ ಶೇ 48 ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ ಮೋಹನ್ ಕುಮಾರ್ ಎಂ. 573, ವಾಣಿಜ್ಯ ವಿಭಾಗದಲ್ಲಿ ಸಂಜನ ಎನ್. 564 ಮತ್ತು ವಿಜ್ಞಾನ ವಿಭಾಗದಲ್ಲಿ ಸಂಜನ ಎಂ 551 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಫಲಿತಾಂಶಕ್ಕಾಗಿ ಶ್ರಮಿಸಿದ ಕಾಲೇಜಿನ ಉಪನ್ಯಾಸಕರನ್ನು ಮತ್ತು ಸಿಬ್ಬಂದಿ ವರ್ಗದವರಿಗೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಮಪ್ರಸಾದ್ ಮತ್ತು ಪ್ರಾಂಶುಪಾಲ ಸಿ.ಆರ್ .ದಿನೇಶ್ ಅಭಿನಂದನೆ ಸಲ್ಲಿಸಿದ್ದಾರೆ.