Mon. Dec 23rd, 2024

ಸಮಾಜದ ಪರಿವರ್ತನೆಯಲ್ಲಿ ನಾರಾಯಣ ಗುರುಗಳ ಪಾತ್ರ ಅಪಾರ : ಮಹೇಶ್ ಸಾಗರ್

Share this with Friends

ಬೆಂಗಳೂರು: ಕಲಾಸಾಗರ ರಂಗ ತಂಡದವರು ತಿಂಗಳ ಕಾರ್ಯಕ್ರಮ ಇತ್ತೀಚೆಗೆ ನಗರದ ಪುನೀತ್ ರಾಜಕುಮಾರ್ ಭವನದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಹೇಶ್ ಸಾಗರ್ ರವರು ಮಾತನಾಡಿ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಇಂದಿನ ರಾಜಕೀಯ ನಾಯಕರು ಅಳವಡಿಸಿಕೊಳ್ಳಬೇಕು ಹಾಗೂ ಈಡಿಗರ ಕುಲ ಕಸುಬಾದ ಹೆಂಡ ಮಾರಾಟವನ್ನು ನಿಲ್ಲಿಸಬೇಕು ಈಡಿಗರು ಸರ್ಕಾರವನ್ನು ಹೆಂಡ ಮಾರುವುದನ್ನು ನಿಷೇಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು ನಾರಾಯಣ ಗುರುಗಳ ತತ್ವ ಸಿದ್ಧಾಂತ ಭಾರತ ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಸಮಾಜ ಸೇವಕಿ, ನಟಿ ಸವಿತಾ ಮಾತನಾಡಿ ಮಹೇಶ್ ಸಾಗರ್ ರವರು ಶ್ರೀನಾರಾಯಣ ಗುರು ರವರು ಉತ್ತಮ ಚಿತ್ರ ಮಾಡಿದ್ದಾರೆ ಅವರ ತಂಡಕ್ಕೆ ಶುಭಾಶಯಗಳನ್ನು ಕೋರಿದರು

ಸಾಹಿತಿಗಳಾದ ಮಹೇಶ್ ಬೆಂಗಳೂರು ಮಾತನಾಡಿ ಸಮಾಜದ ಪರಿವರ್ತನೆಯ ದೃಷ್ಟಿಯಿಂದ ಮಹೇಶ್ ಸಾಗರ್ ರವರು ಶ್ರೀ ನಾರಾಯಣ ಗುರುಗಳ ಚಿತ್ರ ತುಂಬಾ ಪ್ರಾಮುಖ್ಯತೆ ಪಡೆದಿದೆ ಇತ್ತೀಚಿನ ಹಲವಾರು ಸಿನಿಮಾಗಳಲ್ಲಿ ಯಾವುದೇ ಸಾಮಾಜಿಕ ಕಳಕಳಿ ಇಲ್ಲ ಆದರೆ ಮಹೇಶ್ ಸಾಗರ್ ರವರು ತಮ್ಮ ಕಥೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ನಾರಾಯಣಗುರುಗಳ ಎಲ್ಲಾ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಆರ್ಯರು ಬರುವವರೆಗೂ ಭಾರತ ಬುದ್ಧ ರಾಷ್ಟ್ರವಾಗಿತ್ತು ಆರ್ಯರು ಭಾರತಕ್ಕೆ ಬಂದ ಮೇಲೆ ಭಾರತದಲ್ಲಿ ಕಿ.ಪೂ 185 ರಲ್ಲಿ ಮನುಧರ್ಮ ಪ್ರಾರಂಭವಾಹಿತು ಅಂದಿನಿಂದ ಜಾತಿವ್ಯವಸ್ಥೆ, ಅಸ್ಪೃಶ್ಯ ವ್ಯವಸ್ಥೆ ಸೃಷ್ಟಿಯಾಯಿತು ಇದನ್ನು ತೆಗೆದು ಹಾಕಲು ಬಸವಣ್ಣ, ಪೆರಿಯಾರ್, ಸಾವಿತ್ರಿ ಬಾ ಫುಲೆ, ಜ್ಯೋತಿ ಬಾ ಫುಲೆ, ಶಾಹು ಮಹಾರಾಜ್, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣ್ ಗುರುಗಳು , ಅಂಬೇಡ್ಕರ್ ಈಗೇ ನಾನಾ ಸಮಾಜ ಸುಧಾರಕರು ಸಮಾಜ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಅಂಬೇಡ್ಕರ್ ರವರು ಬರೆದ ಸಂವಿಧಾನ ಜಾರಿಗೆ ಬಂದಾಗಿನಿಂದ ಜಾತಿವ್ಯವಸ್ಥೆ ಅಸ್ಪೃಶ್ಯತೆ ಸ್ವಲ್ಪ ಮಟ್ಟಿಗೆ ಕಡಿಮೆಯಾದರು ಈಗಲೂ ಹಿಂದೂ ಧರ್ಮದಲ್ಲಿ ಜಾತಿವ್ಯವಸ್ಥೆ ಸಾಮಾಜಿಕ ಪಿಡುಗಾಗಿ ಜೀವಂತವಾಗಿರುವುದು ನಾವೆಲ್ಲರೂ ಪ್ರತಿದಿನ ನೋಡುತ್ತಿದ್ದೇವೆ ಎಂದು ತಿಳಿಸಿದರು ಹಾಗೆಯೇ ಮಹೇಶ್ ಸಾಗರ್ ತಂಡಕ್ಕೆ ಶುಭಾಶಯಗಳನ್ನು ಕೋರಿದರು

ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಜೋಗಿ ಅವರು ನಾರಾಯಣ ಗುರುಗಳ ಬಾಲ್ಯ. ಅವರ ಹೋರಾಟ. ಸಿದ್ದಾಂತಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ಡಾ. ಸಂಪಂಗಿಯವರು ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರು ಎಂದು ತಿಳಿಸಿದರು ಹಾಗೆಯೇ ಮಹಿಳೆಯರಿಗೆ ಬಡವರಿಗೆ ಹಿಂದುಳಿದವರಿಗೆ ಸಾಮಾಜಿಕ ಭದ್ರತೆ ಸಿಗುವಂತೆ ಮಾಡಲು ನಾರಾಯಣ ಗುರುಗಳು ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.

ಸಾಹಿತಿಗಳು ಮತ್ತು ಚಲನಚಿತ್ರ ನಿರ್ದೇಶಕರಾದ ಡಾ. ಗುಣವಂತ ಮಂಜುರವರು ನಾರಾಯಣ ಗುರುಗಳ ತತ್ವ ಸಿದ್ಧಾಂತ ಪ್ರಸ್ತುತ ಸಮಾಜಕ್ಕೆ ಎಷ್ಟು ಮುಖ್ಯ ನಾವೆಲ್ಲ ಮನುಷ್ಯರಾಗಿ ಮುಂದುವರೆಯೋಣ ಹಾಗೂ ಕಲಾಸಾಗರ ತಂಡದವರು ನಿರ್ಮಾಣ ಮಾಡಿರುವ ಶ್ರೀ ಗುರು ನಾರಾಯಣ ವೈಭವ ಚಿತ್ರ ಇನ್ನು ಹೆಚ್ಚಿನ ಜನರಿಗೆ ತಲುಪಲಿ ಎಂದು ಶುಭಕೋರಿದರು

ಕಾರ್ಯಕ್ರಮದ ನಿರೂಪಣೆಯನ್ನು ನಟಿ ತೆಜಸ್ವಿನಿ ಅಚ್ಚುಕಟ್ಟಾಗಿ ನಿರ್ವಹಿಸಿದರು ಕಾರ್ಯಕ್ರಮದಲ್ಲಿ ರಂಗ ಕಲಾವಿದರಾದ ತಿಮ್ಮಯ್ಯನವರು. ದಿವಾಕರ್ .ಸುರೇಶ್ ಅರಕಲಗೂಡು.ಮಧುಕರ್ ರಾಮಣ್ಣ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.


Share this with Friends

Related Post