Mon. Dec 23rd, 2024

ಸಂಪ್ರದಾಯ, ಸನಾತನ ಸಂಸ್ಕೃತಿಗೆ ನರೇಂದ್ರ ಮೋದಿಯವರ ಮೊದಲ‌ ಆದ್ಯತೆ: ಶಾಸಕಿ‌‌ ಶಶಿಕಲಾ‌ ಜೊಲ್ಲೆ

Share this with Friends

ಚಿಕ್ಕೋಡಿ: ಲೋಕಸಭಾ ಚುನಾವಣೆ ಮತ ಪ್ರಚಾರ ನಿಪ್ಪಾಣಿ‌ ಮತಕ್ಷೇತ್ರದ ಬೂದಿಹಾಳ ಗ್ರಾಮದಲ್ಲಿ‌ ಭಾನುವಾರ ಶಾಸಕಿ ಶಶಿಕಲಾ ಜೊಲ್ಲೆಯವರು ನಡೆಸಿದರು‌. ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದ ಪ್ರಾಚೀನತೆ, ಸಂಪ್ರದಾಯ, ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆದ್ಯತೆ ನೀಡಿದ್ದಾರೆ.

ಇನ್ನು ದಿವ್ಯ ರಾಮಮಂದಿರದ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್‌,ಕೇದಾರನಾಥದ ಪುನರ್‌ ನಿರ್ಮಾಣ ಮತ್ತು ಮಹಾಕಾಲ್‌ ಮಹಾಲೋಕದ ನಿರ್ಮಾಣ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮೂಲಕ ಮೋದಿ ಸರ್ಕಾರವು ನಮ್ಮ ಪರಂಪರೆಯನ್ನು ಪುನರ್ ಸ್ಥಾಪಿಸಿದೆ. ಈ ರೀತಿ ಅನೇಕ‌ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮೋದಿಜಿಯವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶ ಮುನ್ನಡೆಸಬೇಕಾದರೆ ಚಿಕ್ಕೋಡಿ ಲೋಕಸಭೆ ಅಭ್ಯರ್ಥಿಯಾಗಿ ಅಣ್ಣಾಸಾಹೇಬ ಜೊಲ್ಲೆಯವರನ್ನ ಬಹುಮತದಿಂದ ಆಯ್ಕೆ ಮಾಡಬೇಕೆಂದರು.ಈ ಸಭೆಯಲ್ಲಿ ಸ್ಥಳೀಯ ಮುಖಂಡರು, ಗಣ್ಯರು,ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು


Share this with Friends

Related Post