ಮೈಸೂರು,ಜು.15: ಕನ್ನಡದಲ್ಲಿ ಸ್ಪಷ್ಟ ಹಾಗೂ ಸ್ವಚ್ಚ ಶೈಲಿಯ ನಿರೂಪಣೆ ಮೂಲಕ ಜನಮಾನಸದಲ್ಲಿ ಅಚ್ಚುಳಿದ ನಿರೂಪಕಿ, ನಟಿ ಅಪರ್ಣಾ ಅವರಿಗೆ ಜೈಭೀಮ್ ಜನಸ್ಪಂದನ ವೇದಿಕೆ ಯಿಂದ ನುಡಿನಮನ ಸಲ್ಲಿಸಲಾಯಿತು.
ಸೋಮವಾರ ಲಕ್ಷ್ಮಿಪುರಂ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ
ದಸರಾ ವಸ್ತು ಪ್ರದರ್ಶನದ ನಿರೂಪಕ ಅಜಯ್ ಶಾಸ್ತ್ರಿ ಮಾತನಾಡಿದರು.
ಅಪರ್ಣಾ ಅವರಿಗೆ ಕನ್ನಡಭಾಷಾ ಸಾಹಿತ್ಯ ಅಭಿರುಚಿ ಬರಲು ಅವರ ತಂದೆ ಕೆಎಸ್ ನಾರಾಯಣಸ್ವಾಮಿ ಅವರು ಕಾರಣ ಎಂದು ಸ್ಮರಿಸಿದರು.
ಅವರ ತಂದೆಯ ಆಪ್ತರಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರ ಮಸಣದ ಹೂವು ಚಿತ್ರದ ಗಂಭೀರಪಾತ್ರದ ನಟನೆಯ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡರು, ಆಕಾಶವಾಣಿ ದೂರದರ್ಶನದಲ್ಲಿ ವಾರ್ತೆ ಸುದ್ಧಿವಾಚಕರಾಗಿ, ಪ್ರಧಾನಿಯವರ ಸಂದರ್ಶನ, ದೀಪಾವಳಿ ಕಾರ್ಯಕ್ರಮದ ಸತತ 8ಘಂಟೆಗಳ ನಿರರ್ಗಳ ನಿರೂಪಣೆ, ಕನ್ನಡ ಸಂಸ್ಕೃತಿ ಇಲಾಖೆಯ ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಹಬ್ಬ ಸೇರಿದಂತೆ ಬಹುತೇಖ ಕಾರ್ಯಕ್ರಮಗಳ ನಿರೂಪಕಿಯಾಗಿ ಜನಪ್ರಿಯತೆ ಪಡೆದವರು ಎಂದು ಅಜಯ್ ಶಾಸ್ತ್ರಿ ಬಣ್ಣಿಸಿದರು.
ಸರ್ಕಾರಿ ಕಾರ್ಯಕ್ರಮಗಳ ಅಚ್ಚುಕಟ್ಟಾದ ನಿರೂಪಣೆಯಿಂದ ಬಹುಬೇಡಿಕೆಯಾಗಿದ್ದರು ಎಂದು ಹೇಳಿದರು.
ಕನ್ನಡ ಭಾಷೆ ಬೆಳೆಸುವ ಉಳಿಸುವ ಹಿನ್ನೆಲೆಯಲ್ಲಿ ನಿರೂಪಣಾ ಶಾಲೆ ತೆರೆಯಬೇಕೆಂಬ ಅಪರ್ಣಾ ಅವರ ಕನಸನ್ನು ಸಾಕಾರಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಲಿ ಎಂದು ಅಜಯ್ ಶಾಸ್ತ್ರಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷರಾದ ಚೇತನ್ ಕಾಂತರಾಜು, ರವಿಚಂದ್ರ, ವರುಣ ಮಹಾದೇವ್, ಲೋಕೇಶ್, ಗೋಬಿ ನಾಗರಾಜ್, ಸ್ವಾಮಿ, ಕಡಕೋಳ ಶಿವು, ಸಂತೋಷ್ ಕಿರಾಲು, ಎಸ್ ಎನ್ ರಾಜೇಶ್, ರಾಕೇಶ್, ಹರೀಶ್ ನಾಯ್ಡು, ದುರ್ಗಾ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.