ಮೈಸೂರು: ಕಳೆದ ಡಿಸೆಂಬರ್ 29 ಮತ್ತು 30 ರಂದು ಗುಜರಾತ್ ನ ಸೂರತ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಟಂಬ್ಲಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ಅನ್ವಿ ಸಾಧನೆ ಮಾಡಿದ್ದಾರೆ.
ಪವಿತ್ರ ಮತ್ತು ಅನೂಪ್ ದಂಪತಿಗಳ ಪುತ್ರಿ 5ನೇ ತರಗತಿ ವಿದ್ಯಾರ್ಥಿನಿ ಅನ್ವಿ ಎ. ಹರಿತಸ ಈ ಸಾಧನೆ ಮಾಡಿದ್ದಾರೆ.
ಅನ್ವಿ ಅವರು ಟಂಬ್ಲಿಂಗ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಇವರು ಮೈಸೂರು ನಗರದ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ವತ್ ಸುಂದರರಾಜು ಹಾಗೂ ಲೋಕೇಶ್.ಬಿ ಎಂಬುವರ ಬಳಿ ತರಬೇತಿ ಪಡೆಯುತ್ತಿದ್ದಾರೆ.