Fri. Dec 27th, 2024

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ವಿವೇಕಾನಂದ ಬಿರುಸಿನ ಪ್ರಚಾರ

Share this with Friends

ಮೈಸೂರು, ಮೇ.20: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಕೆ. ವಿವೇಕಾನಂದ ಬಿರುಸಿನ ಪ್ರಚಾರ ನಡೆಸಿದರು.

ನಗರದ ಮಹಾರಾಣಿ ಕಾಲೇಜು, ಮಹಾರಾಜ, ಯುವರಾಜ, ಡಿ.ಬನುಮಯ್ಯ, ವಿದ್ಯಾವರ್ಧಕ, ಸೋಮಾನಿ ಬಾಸುದೇವ್ ಕಾಲೇಜು ಸೇರಿದಂತೆ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ ಕಾಲೇಜಿನ ಅಧ್ಯಾಪಕರು ಹಾಗೂ ಶಿಕ್ಷಕರಲ್ಲಿ ತಮಗೆ ಮೊದಲ
ಪ್ರಾಶಸ್ತ್ರ್ಯ ಮತ ನೀಡಬೇಕೆಂದು ಮನವಿ ಮಾಡಿದರು

ಈ ವೇಳೆ ಮಾತನಾಡಿದ ವಿವೇಕಾನಂದ ಅವರು ಶಿಕ್ಷಕರ ಕುಂದುಕೊರತೆಗಳನ್ನ ಆಲಿಸಿ ಮಹತ್ತರವಾದ ಬದಲಾವಣೆ ತರಲು ಶಿಕ್ಷಕರ ಪ್ರತಿನಿಧಿಯಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿಯೆತ್ತಲು ಸಿದ್ದನಿದ್ದೇನೆ ಎಂದು ತಿಳಿಸಿದರು.

ಸರ್ಕಾರದಿಂದ ಶಿಕ್ಷಕರಿಗೆ ಸಿಗಬೇಕಾದ ಮಾನ್ಯತೆಗಳು ಬೇಡಿಕೆಗಳನ್ನ ನಿವಾರಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತೇನೆ, ಎನ್.ಡಿ.ಎ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿರುವ ನನಗೆ ಈಗಾಗಲೇ ಹಲವಾರು ಶಾಲಾ ಕಾಲೇಜು ಶಿಕ್ಷಕರ ಒಕ್ಕೂಟ ಸಂಘಗಳು ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿವೆ, ಶಿಕ್ಷಕರ ಬಳಿ ಮತಯಾಚನೆಗೆ ತೆರಳಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು

ಶಿಕ್ಷಕರಾದ ಕೃಷ್ಣಕುಮಾರ್, ಬಾಲಸುಬ್ರಮಣ್ಯ, ಪ್ರದೀಪ್ ಕುಮಾರ್, ನಟರಾಜ್, ಹಾಗೂ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾ ನಂದೀಶ್ ಮತ್ತಿತರರು ಹಾಜರಿದ್ದರು.


Share this with Friends

Related Post