Mon. Nov 4th, 2024

ನೇಹಾ ಹತ್ಯೆಯಿಂದ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ:ಡಿ ಟಿ ಪ್ರಕಾಶ್

Share this with Friends

ಮೈಸೂರು,ಏ.20: ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯಿಂದ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹೇಳಿದ್ದಾರೆ.

ನಗರದ ಲಕ್ಷ್ಮಿಪುರಂನ ಪ್ರಜ್ಞಾವಂತ ನಾಗರಿಕ ವೇದಿಕೆಯ ಕಚೇರಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಭಾವಚಿತ್ರ ಹಿಡಿದು ಶಾಂತಿ ಮಂತ್ರ ಪಠಣ ಮಾಡಿ ಶಾಂತಿ ಕೋರಿ ಸಂತಾಪ ಸಲ್ಲಿಸಿ ಅವರು ಮಾತನಾಡಿದರು.

ಈಗ ಹೆಣ್ಣು ಹೆತ್ತ ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯದ ಗತಿ ಏನು ಎಂದು ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ, ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಕೊಲೆ ಮಾಡಿದ ರಾಕ್ಷಸ ಫಯಾಜ್ ಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲೆ ಇಂತಹ ಹೇಯ ಕೃತ್ಯಗಳು ಹೆಚ್ಚುತ್ತಿರುವುದು ಖಂಡನೀಯ. ಇಂತಹ ಪ್ರಕರಣಗಳಿಗೆ ಸರ್ಕಾರ ಪ್ರತ್ಯೇಕ ಕಠಿಣ ಕಾನೂನು ರೂಪಿಸಬೇಕು. ಬರ್ಬರವಾಗಿ ಹತ್ಯೆಯಾಗಿರುವ ಆ ಹೆಣ್ಣು ಮಗುವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಮುಖಂಡ ರಾಕೇಶ್ ಭಟ್ ಮಾತನಾಡಿ ಪ್ರೀತಿ ಹೆಸರಿನಲ್ಲಿ ಹದಿ ಹರೆಯದ ಹಿಂದೂ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿ ಅವರನ್ನು ಮತಾಂತರ ಮಾಡುವ ಲವ್ ಜಿಹಾದ್ ದೇಶದಾದ್ಯಂತ ನಡೆಯುತ್ತಿದೆ. ಇದರ ಬಗ್ಗೆ ಪೋಷಕರು ಜಾಗೃತರಾಗಬೇಕೆಂದು ಮನವಿ ಮಾಡಿದರು.

ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಆರ್ ಪರಮೇಶ್, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಸಂದೇಶ್, ಬೈರತಿ ಲಿಂಗರಾಜು, ಶ್ರೀನಿವಾಸ್, ದುರ್ಗಾ ಪ್ರಸಾದ್ ಮತ್ತಿತರರು ಸಂತಾಪ ಸಭೆಯಲ್ಲಿ ಭಾಗಿಯಾಗಿದ್ದರು.


Share this with Friends

Related Post