Fri. Mar 6th, 2026

ಹೊಸ ವರ್ಷಾಚರಣೆ: ಸನ್ನದ್ಧವಾಗಿರಲು ಆಸ್ಪತ್ರೆಗಳಿಗೆ ಸೂಚನೆ

Share this with Friends

ಬೆಂಗಳೂರು: ಹೊಸ ವರ್ಷ-2026 ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ‌ ಘಟನೆಗಳು ನಡೆದಲ್ಲಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಕೊಠಡಿ, ಆಂಬ್ಯುಲೆನ್ಸ್ ವಾಹನ ಸೌಲಭ್ಯ ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ತುರ್ತು ಚಿಕಿತ್ಸೆ ಸೇವೆಗಳನ್ನು ಒದಗಿಸಲು ಸಿದ್ದತೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ದಿ: 31-12-2025 ರಿಂದ 01.01.2026 ರವರೆಗೆ ಹೊಸ ವರ್ಷ-2026 ಆಗಮನದ ಆಚರಣೆ ಸಮಯದಲ್ಲಿ, ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕರು ಅಸ್ವಸ್ಥಗೊಳ್ಳುವ ಮತ್ತು ವಿವಿಧ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಗಳಿರುವುದರಿಂದ, ಉಲ್ಲೇಖಿತ ಪತ್ರದ ಪ್ರಕಾರ ತುರ್ತು ಕರ್ತವ್ಯಕ್ಕಾಗಿ, ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದೆ.

ಸದರಿ ಮಹಿಳೆಯರ ಪ್ರತ್ಯೇಕ ಕೊಠಡಿಗೆ ಮಹಿಳಾ ಸಿಬ್ಬಂದಿಯನ್ನು ಚಿಕಿತ್ಸೆಗೆ ನಿಯೋಜಿಸುವುದು ಹಾಗೂ ಆಂಬ್ಯುಲೆನ್ಸ್‌ ವಾಹನ ಸೌಲಭ್ಯ ಮತ್ತು ಅಗತ್ಯ ಔಷಧಗಳು ಲಭ್ಯವಿರುವಂತೆ ವ್ಯವಸ್ಥೆಗೊಳಿಸಿ ಸಾರ್ವಜನಿಕರಿಗೆ ವೈದ್ಯಕೀಯ ತುರ್ತು ಚಿಕಿತ್ಸೆ ಸೇವೆಗಳನ್ನು ಒದಗಿಸಲು ಸೂಚಿಸಿದೆ.


Share this with Friends

Related Post