Mon. Dec 23rd, 2024

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಅನೇಕ ಕಡೆ ಎನ್‌ಐಎ ದಾಳಿ

Rameshwaram-Cafe-Blast Case
Share this with Friends

ಬೆಂಗಳೂರು. ಮಾ.27: ಬೆಂಗಳೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬೆಂಗಳೂರು, ತೀರ್ಥಹಳ್ಳಿ ಹಾಗೂ ಚೆನ್ನೈನ ಅನೇಕ ಕಡೆಗಳಲ್ಲಿ ದಾಳಿ ನಡೆಸಿದೆ. ಚೆನ್ನೈನ ಮೂರು ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಐದಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಶೋಧ ಕಾರ್ಯ ನಡೆಸಿದ್ದಾರೆ. ಸುಮಾರು 5 ವಾಹನಗಳಲ್ಲಿ ಆಗಮಿಸಿರುವ 15ಕ್ಕೂ ಹೆಚ್ಚು ಅಧಿಕಾರಿಗಳು ಕೆಲವು ಶಂಕಿತರ ಮನೆಗಳಲ್ಲಿ ತಪಾಸಣೆ ನಡೆಸಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಈವರೆಗೂ ಎನ್‌ಐಎ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಮಂಗಳವಾರ ಕೂಡ ಇಬ್ಬರು ಶಂಕಿತರನ್ನು ಬಂಧಿಸಿದೆ. ಶಂಕಿತ ಬಾಂಬರ್ ಜತೆ ಈ ಇಬ್ಬರೂ ನೇರ ಸಂಪರ್ಕ ಹೊಂದಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಂಧಿತರು ನೀಡಿದ ಮಾಹಿತಿ ಆಧಾರದಲ್ಲಿ ನಡೆಸಿದೆ.

ಮುಸಾವಿರ್, ಅಬ್ದುಲ್ ತಾಹಾ ಮತ್ತು ಸರ್ದಾರ್ ನವೀದ್‌ನ ಮನೆಗಳು ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ನಡೆದಿದೆ. ಮುಸಾವಿರ್ ಮತ್ತು ತಾಹಾ ಇಬ್ಬರೂ ಹಳೆಯ ಪ್ರಕರಣಗಳಲ್ಲಿ ಎನ್‌ಐಎಗೆ ಬೇಕಿದ್ದಾರೆ. ಎನ್‌ಐಎ ಹಾಗೂ ಪೊಲೀಸರು ವಿವಿಧ ರಾಜ್ಯಗಳಲ್ಲಿ ವ್ಯಾಪಕ ಶೋಧ ನಡೆಸಿದ್ದರೂ, ದಾಳಿಕೋರ ಮಾತ್ರ ಈವರೆಗೂ ಪತ್ತೆಯಾಗಿಲ್ಲ.


Share this with Friends

Related Post