Tue. Dec 24th, 2024

ಕೇಂದ್ರ ವಿದೇಶಾಂಗ ಸಚಿವರಿಂದ ಈತನಕ ಯಾವುದೇ ಪತ್ರ ಬಂದಿಲ್ಲ:ಪರಮೇಶ್ವರ್

Share this with Friends

ಬೆಂಗಳೂರು, ಮೇ.26: ಕೇಂದ್ರ ವಿದೇಶಾಂಗ ಸಚಿವರಿಂದ ಈತನಕ ಯಾವುದೇ ಪತ್ರ ಹಾಗೂ ಮಾಹಿತಿ ನಮಗೆ ಬಂದಿಲ್ಲ ಎಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಜ್ವಲ್ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ರದ್ದತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪತ್ರ ತಲುಪಿದೆ ಎಂಬ ಹೇಳಿಕೆಯನ್ನು ವಿದೇಶಾಂಗ ಸಚಿವರು ನೀಡಿದ್ದಾರೆ, ಆದರೆ ಅವರಿಂದ ಇದುವರೆಗೆ ಯಾವುದೇ ಪತ್ರ ಬಂದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

ಮುಖ್ಯಮಂತ್ರಿಗಳು ಎರಡು ಪತ್ರವನ್ನು ಕೇಂದ್ರಕ್ಕೆ ಬರೆದಿದ್ದಾರೆ, ಆದರೆ ಮೇ ಒಂದರಂದು ಬರೆದ ಪತ್ರ ತಲುಪಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ, ಅದಕ್ಕೂ ಮೊದಲು ಬರೆದ ಪತ್ರ ಏನಾಯಿತು ಗೊತ್ತಿಲ್ಲ ಅವರನ್ನೇ ಕೇಳಬೇಕು ಎಂದು ಹೇಳಿದರು.

ಹಾಸನದಲ್ಲಿನ ಲೈಂಗಿಕ ಸಂತ್ರಸ್ತರಿಗೆ ಎಲ್ಲ ರೀತಿಯ ಭದ್ರತೆಯನ್ನು ಕೊಡಲಾಗುತ್ತದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು. ಈಗಾಗಲೇ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಅವರು ರಕ್ಷಣೆ ಕೊಡುತ್ತಾರೆ ಎಂದು ಸ್ಪಷ್ಟಪಡಿಸಿದರು.


Share this with Friends

Related Post