Tue. Dec 24th, 2024

ಬೆ.ಗ್ರಾಮಾಂತರದಿಂದ ಡಿ.ಕೆ ಸುರೇಶ್ ವಿರುದ್ದ ಹೆಚ್.ಡಿಕೆ ಸ್ಪರ್ಧಿಸಿದರೂ ಚಿಂತೆ ಇಲ್ಲ-ಡಿಕೆಶಿ

Share this with Friends

ಮಂಗಳೂರು, ಫೆ.17: ಬೆ.ಗ್ರಾಮಾಂತರದಿಂದ
ಡಿ.ಕೆ ಸುರೇಶ್ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದರೂ ಚಿಂತೆ ಇಲ್ಲಾ ಎಂದು ಡಿಸಿಎಂ‌ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಡಿ.ಕೆ ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿ ಅಲ್ಲ, ಹಳ್ಳಿಯ ಸಂಸದ. ಹೀಗಾಗಿ ಬೆ.ಗ್ರಾಮಾಂತರದಿಂದ ಡಿ.ಕೆ ಸುರೇಶ್ ವಿರುದ್ದವೇ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧಿಸಲಿ ಏನೂ ಚಿಂತೆ ಇಲ್ಲ ತಿಳಿಸಿದರು.

ಮಂಗಳೂರಿನಲ್ಲಿ ಮಾಧ್ಯಮದವರ‌ ಜತೆ ಮಾತನಾಡಿದ ಅವರು ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರು, ಕುಮಾರಸ್ವಾಮಿ ವಿರುದ್ಧವೇ ಸ್ಪರ್ಧಿಸಿದ್ದವನು ನಾನು ಎಂದು ಹೇಳಿದರು.

ನನ್ನ ಸಹೋದರನ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಆತನೇ ಗೆದ್ದಿದ್ದಾನೆ. ಬಿಜೆಪಿ, ಜೆಡಿಎಸ್ ನನ್ನ ಸಹೋದರನ ವಿರುದ್ಧ ಸ್ಪರ್ಧಿಸಿದ್ದಾಗಲೂ ಗೆದ್ದಿದ್ದಾನೆ. ದೇವೇಗೌಡರು, ಕುಮಾರಸ್ವಾಮಿ ನಮ್ಮಲ್ಲಿ ಎಂಪಿ ಆಗಿದ್ದವರು. ಹಳೇ ಎಂಪಿಗಳು ಹಾಗೂ ಈ ಎಂಪಿ ವ್ಯತ್ಯಾಸ ಜನ ನೋಡಿದ್ದಾರೆ‌.

ಬೆಂಗಳೂರು ಗ್ರಾಮಾಂತರದಲ್ಲಿ ಯಾರೇ ನಿಂತರೂ ಸ್ವಾಗತಿಸುತ್ತೇವೆ ಎಂದು ಹೇಳಿದರು ಡಿಕೆಶಿ.

ರಾಜಕೀಯದಲ್ಲಿ ಯಾವುದೂ ಶಾಶ್ವತ ಹಾಗೂ ಅಸಾಧ್ಯವಲ್ಲ. ರಾಜಕಾರಣ ಸಾಧ್ಯತೆಗಳ ಕಲೆ, ಹೀಗಾಗಿ ಇಲ್ಲಿ ಬದಲಾವಣೆ ವಿಶ್ವಾಸವಿದೆ. ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡುತ್ತಾ ಇದ್ದೇವೆ. ಈ ಭಾಗದಲ್ಲಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಧರ್ಮ ರಾಜಕೀಯ ಇದೆ. ಬಿಜೆಪಿ ಅಭಿವೃದ್ಧಿ ಮಾಡುತ್ತಾ ಇಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಅಲೋಚನೆ ಮಾಡುತ್ತೇವೆ. ಉದ್ಯೋಗ ಸೃಷ್ಟಿಸುತ್ತೇವೆ, ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ.

ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು.ಬ್ಯಾಂಕ್​​ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಾ ಇವೆ. ಇಲ್ಲಿನ ಜನ ದೇವಸ್ಥಾನಗಳಲ್ಲಿ ಭಕ್ತಿಯಿಂದ ಇರುತ್ತಾರೆ. ಅದು ವ್ಯವಹಾರಗಳಲ್ಲೂ ಇರಬೇಕು ಎಂದು ಡಿ.ಕೆ ಶಿವಕುಮಾರ್ ಸಲಹೆ ನೀಡಿದರು.


Share this with Friends

Related Post